ಕೀವ್: ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲೆ ದೊಡ್ಡ ದಾಳಿ ನಡೆಸಿರುವ ರಷ್ಯಾ, 99 ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದೇಶದಾದ್ಯಂತ ಹಲವೆಡೆ ಭಾರಿ ದಾಳಿ ನಡೆಸಿದೆ ಎಂದು ಉಕ್ರೇನ್ ಪಡೆಗಳು ತಿಳಿಸಿವೆ.
ಕೀವ್: ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲೆ ದೊಡ್ಡ ದಾಳಿ ನಡೆಸಿರುವ ರಷ್ಯಾ, 99 ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದೇಶದಾದ್ಯಂತ ಹಲವೆಡೆ ಭಾರಿ ದಾಳಿ ನಡೆಸಿದೆ ಎಂದು ಉಕ್ರೇನ್ ಪಡೆಗಳು ತಿಳಿಸಿವೆ.
'ದೇಶದಾದ್ಯಂತ 60 ಶಾಹೆದ್ ಡ್ರೋನ್‌ಗಳು ಮತ್ತು 39 ವಿವಿಧ ಕ್ಷಿಪಣಿಗಳ ದಾಳಿ ನಡೆಸಿದ್ದು, ಇದರಲ್ಲಿ 58 ಡ್ರೋನ್ ಮತ್ತು 26 ಕ್ಷಿಪಣಿಗಳನ್ನು ನಮ್ಮ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ' ಎಂದು ಉಕ್ರೇನ್‌ನ ವಾಯುಪಡೆ ತಿಳಿಸಿದೆ.
ಕೇಂದ್ರ ಮತ್ತು ಪಶ್ಚಿಮ ಪ್ರದೇಶಗಳಲ್ಲಿನ ಉಷ್ಣ ಮತ್ತು ಜಲವಿದ್ಯುತ್ ಸ್ಥಾವರಗಳನ್ನು ಒಳಗೊಂಡಂತೆ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ರಷ್ಯಾ ಈ ದಾಳಿ ನಡೆಸಿದೆ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಗ್ರಿಡ್ ಆಪರೇಟರ್, ಉಕ್ರೇನೆರ್ಗೊ ಹೇಳಿದೆ.
ಅತಿ ದೊಡ್ಡ ಖಾಸಗಿ ವಿದ್ಯುತ್ ಗ್ರಿಡ್ 'ಡಿಟಿಇಕೆ' ಕೂಡ, ಶುಕ್ರವಾರದ ದಾಳಿಯಲ್ಲಿ ತನ್ನ ಮೂರು ಉಷ್ಣವಿದ್ಯುತ್ ಸ್ಥಾವರಗಳು ಹಾನಿಗೊಳಗಾಗಿವೆ ಎಂದು ತಿಳಿಸಿದೆ.
ಇನ್ನು 5 ವರ್ಷದ ಬಾಲಕಿ ಸೇರಿದಂತೆ ಉಕ್ರೇನ್‌ನ ವಿವಿಧ ಪ್ರದೇಶಗಳಲ್ಲಿ ಐದು ಜನರು ರಷ್ಯಾದ ದಾಳಿಯಲ್ಲಿ ಗಾಯಗೊಂಡಿದ್ದಾರೆ. 10 ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದ ವಾಯುದಾಳಿ ಕುರಿತು ಎಚ್ಚರಿಕೆ ಸಂದೇಶಗಳು ಮುಂದುವರೆದವು ಎಂದು ಉಕ್ರೇನ್‌ನ ಸಚಿವ ಇಹೋರ್ ಕ್ಲಿಮೆನ್ಕೊ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.