ಬಹುವಿಶಿಷ್ಟತೆಯ ಭಾರತೀಯ ವ್ಯವಸ್ಥೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗೆ ಸ್ಪರ್ಧಿಸದೇ ಸಂಸದರಾಗಬಹುದು. ಕೇರಳದಿಂದ ಒಂಬತ್ತು ಮಂದಿ ಹೀಗೆ ಸಂಸದರಾದವರಿದ್ದಾರೆ. ಅವರಲ್ಲಿ ಒಬ್ಬರು ಈಗ ಲೋಕಸಭೆಗೆ ಸ್ಪರ್ಧಾ ಕಣದಲ್ಲಿದ್ದಾರೆ.
ಒಂಬತ್ತು ಮಲಯಾಳಿಗಳು ನಾಮನಿರ್ದೇಶನದ ಮೂಲಕ ಸಂಸತ್ತಿನ ಸದಸ್ಯರಾದರು. ಸರ್ದಾರ್ ಕೆ.ಎಂ. ಪಣಿಕ್ಕರ್, ಜಿ. ರಾಮಚಂದ್ರನ್, ಜಿ. ಶಂಕರ ಕುರುಪ್, ಅಬು ಅಬ್ರಹಾಂ, ಕೆ. ಕಸ್ತೂರಿರಂಗನ್, ಸುರೇಶ್ ಗೋಪಿ, ಪಿ.ಟಿ. ಉಷಾ, ಚಾಲ್ರ್ಸ್ ಡಯಾಸ್ ಮತ್ತು ರಿಚರ್ಡ್ ಹೇ. ಈ ಏಳುಮಂದಿ ನಾಮನಿರ್ದೇಶನಗೊಂಡು ರಾಜ್ಯಸಭೆಗೆ ಸದಸ್ಯರಾದವರಾದವರು. ಇಬ್ಬರು ಆಂಗ್ಲೋ ಇಂಡಿಯಾದ ಪ್ರತಿನಿಧಿಗಳಾಗಿ ಲೋಕಸಭೆಗೂ ಆಯ್ಕೆಯಾದವರಾಗಿದ್ದಾರೆ.
ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವದ ಆಧಾರದ ಮೇಲೆ 12 ವ್ಯಕ್ತಿಗಳನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡುತ್ತಾರೆ.
ಖ್ಯಾತ ಬರಹಗಾರ, ರಾಜನೀತಿಜ್ಞ ಮತ್ತು ಇತಿಹಾಸಕಾರ ಸರ್ದಾರ್ ಕೆ ಎಂ ಪಣಿಕ್ಕರ್ ಅವರು ಸಂಸದರಾದ ಮೊದಲ ಕೇರಳೀಯ. ಪ್ರೊ. ಸತ್ಯೇಂದ್ರನಾಥ್ ಬೋಸ್ ಅವರಿಂದ ತೆರವಾದ ಸ್ಥಾನಕ್ಕೆ ಅವರನ್ನು ಆಗಸ್ಟ್ 25, 1959 ರಂದು ನಾಮನಿರ್ದೇಶನ ಮಾಡಲಾಯಿತು. ಪಣಿಕ್ಕರ್ ಅವರನ್ನು ಏಪ್ರಿಲ್ 3, 1960 ರಿಂದ ಮರು-ನಾಮನಿರ್ದೇಶನ ಮಾಡಲಾಯಿತು. ಅವರು ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಕಗೊಂಡ ನಂತರ 22 ಮೇ 1961 ರಂದು ರಾಜೀನಾಮೆ ನೀಡಿದರು.
ಖ್ಯಾತ ಗಾಂಧಿವಾದಿ ಮತ್ತು ಗಾಂಧಿಗ್ರಾಮ ವಿಶ್ವವಿದ್ಯಾಲಯದ ಸಂಸ್ಥಾಪಕ ಜಿ. ರಾಮಚಂದ್ರನ್ ಅವರು ಏಪ್ರಿಲ್ 3, 1964 ರಿಂದ ಏಪ್ರಿಲ್ 2, 1970 ರವರೆಗೆ ಆರು ವರ್ಷಗಳ ಕಾಲ ರಾಜ್ಯಸಭೆಯ ಸದಸ್ಯರಾಗಿದ್ದರು. ಡಾ. ಜಿ. ರಾಮಚಂದ್ರನ್ ಅವರ ನಂತರ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಮಹಾಕವಿ ಜಿ. ಶಂಕರ ಕುರುಪ್ ರಾಜ್ಯಸಭೆಗೆ ತಲುಪಿದರು. ಡಾ. ಧನಂಜಯ ರಾಮಚಂದ್ರ ಗಾಡ್ಗೀಳ್ ಅವರಿಂದ ತೆರವಾದ ಸ್ಥಾನಕ್ಕೆ ಅವರು 2 ಏಪ್ರಿಲ್ 1968 ರಂದು ನಾಮನಿರ್ದೇಶನಗೊಂಡರು. ನಂತರ ಖ್ಯಾತ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ನಾಮನಿರ್ದೇಶನದ ಮೂಲಕ ಆಯ್ಕೆಯಾದರು.
1964 ರಿಂದ 1978 ರವರೆಗೆ ರಾಜ್ಯಸಭೆಯಲ್ಲಿ ನಾಮನಿರ್ದೇಶನದ ಮೂಲಕ ಕೇರಳೀಯರಿದ್ದರು. 1968 ರಿಂದ 1970 ರವರೆಗೆ ಏಕಕಾಲದಲ್ಲಿ ಇಬ್ಬರಿದ್ದುದೂ ವಿಶೇಷ. ಜಿ. ರಾಮಚಂದ್ರನ್ ಮತ್ತು ಅಬು ಅಬ್ರಹಾಂ ಆರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರು. ಇಸ್ರೋದ ಹಲವಾರು ಸಂಶೋಧನಾ ಯೋಜನೆಗಳ ನೇತೃತ್ವ ವಹಿಸಿದ್ದ ಇಸ್ರೋದ ಮಾಜಿ ಅಧ್ಯಕ್ಷ ಕಸ್ತೂರಿರಂಗನ್ ಅವರು 2003-2009ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಸುರೇಶ್ ಗೋಪಿ ಅವರನ್ನು ನರೇಂದ್ರ ಮೋದಿ ಸರ್ಕಾರ 29 ಏಪ್ರಿಲ್ 2016 ರಂದು ನಾಮನಿರ್ದೇಶನ ಮಾಡಿತು. ಜುಲೈ 7, 2022 ರಂದು ಪಿ.ಟಿ ಉಷಾ ಕೂಡ ನಾಮನಿರ್ದೇಶನದ ಮೂಲಕ ರಾಜ್ಯಸಭೆ ತಲುಪಿದ್ದರು.
ಆಂಗ್ಲೋ-ಇಂಡಿಯನ್ ಪ್ರತಿನಿಧಿಗಳಾಗಿ ಇಬ್ಬರು ಜನರನ್ನು ಲೋಕಸಭೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ಮೊದಲ ಆಂಗ್ಲೋ ಇಂಡಿಯನ್ ಮಲಯಾಳಿ ಡಾ ಚಾಲ್ರ್ಸ್ ಡಯಾಸ್ ಅವರು ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನಗೊಂಡರು. ಇವರು ಕೊಚ್ಚಿಯ ಎರ್ನಾಕುಳಂ ಮೂಲದವರು. ನರೇಂದ್ರ ಮೋದಿ ಸರ್ಕಾರವು ಡಾ. ರಿಚರ್ಡ್ ಹೇ ಎಂಬ ಕಣ್ಣೂರಿನವರನ್ನು ಆಯ್ಕೆಮಾಡಿತ್ತು.
ನಾಮ ನಿರ್ದೇಶನಗೊಂಡವರಲ್ಲಿ ಸುರೇಶ್ ಗೋಪಿ ಒಬ್ಬರು ಮಾತ್ರ ನಂತರ ಚುನಾವಣೆ ಕಣಕ್ಕಿಳಿದವರು. 2021ರಲ್ಲಿ ರಾಜ್ಯಸಭೆಯಲ್ಲಿದ್ದಾಗ ತ್ರಿಶೂರ್‍ನಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಈಗ ಅವಧಿ ಮುಗಿದ ನಂತರ ತ್ರಿಶೂರ್ ನಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.