ನವದೆಹಲಿ: ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಉಸ್ತುವಾರಿಗಳು ಹಾಗೂ ಸಹ-ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.
ನವದೆಹಲಿ: ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಉಸ್ತುವಾರಿಗಳು ಹಾಗೂ ಸಹ-ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿದೆ.
ರಾಜಸ್ಥಾನದಲ್ಲಿ ಬಿಜೆಪಿ ನಾಯಕ ವಿನಯ್ ಸಹಸ್ರಬುದ್ದೆ ಅವರನ್ನು ಪಕ್ಷದ ಉಸ್ತುವಾರಿಯಾಗಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ವಿಜಯ ರಾಹತ್ಕರ್ ಮತ್ತು ಪರ್ವೇಶ್ ವರ್ಮಾ ಅವರನ್ನು ಸಹ-ಉಸ್ತುವಾರಿಗಳಾಗಿ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸತೀಶ್ ಪುನಿಯಾ ಅವರನ್ನು ಹರಿಯಾಣದ ಉಸ್ತುವಾರಿಯಾಗಿ ಮತ್ತು ಸುರೇಂದ್ರ ಸಿಂಗ್ ನಾಗರ್ ಅವರನ್ನು ಸಹ-ಉಸ್ತುವಾರಿಯಾಗಿ ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ನೇಮಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರನ್ನು ಲೋಕಸಭಾ ಚುನಾವಣೆಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ. ಪಕ್ಷದ ನಾಯಕ ಸಿದ್ದಾರ್ಥ್ ನಾಥ್ ಸಿಂಗ್ ಅವರು ಸಹ-ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.