HEALTH TIPS

ಚುನಾವಣೆಗೆ ಸ್ಪರ್ಧಿಸದಿರಲು ಜಯಂತ್‌ ಸಿನ್ಹಾ, ಗೌತಮ್‌ ಗಂಭೀರ್‌ ನಿರ್ಧಾರ

            ವದೆಹಲಿ: ಬಿಜೆಪಿಯ ಇಬ್ಬರು ಪ್ರಮುಖ ಸಂಸದರಾದ ಜಯಂತ್‌ ಸಿನ್ಹಾ ಮತ್ತು ಗೌತಮ್‌ ಗಂಭೀರ್‌ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ.

              ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.‍ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದು, ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವಂತೆ ಮನವಿ ಮಾಡಿರುವುದಾಗಿ ಈ ಇಬ್ಬರು ನಾಯಕರು ತಿಳಿಸಿದ್ದಾರೆ.

               ಜಾರ್ಖಂಡ್‌ನ ಹಜಾರಿಬಾಗ್‌ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಜಯಂತ್‌ ಸಿನ್ಹಾ, 'ನೇರ ಚುನಾವಣಾ ಕರ್ತವ್ಯದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಪಕ್ಷದ ಆರ್ಥಿಕ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಕೆಲಸ ಮುಂದುವರಿಸುವೆ' ಎಂದು ಶನಿವಾರ ಸಾಮಾಜಿಕ ಮಾಧ್ಯಮ 'ಎಕ್ಸ್‌' ಪೋಸ್ಟ್‌ನಲ್ಲಿ ಹೇಳಿದ್ದಾರೆ.

              ಮಾಜಿ ಕೇಂದ್ರ ಸಚಿವರೂ ಆದ ಜಯಂತ್‌ ಸಿನ್ಹಾ 'ಭಾರತವು ಸೇರಿ ವಿಶ್ವದಾದ್ಯಂತ ಜಾಗತಿಕ ಹವಾಮಾನ ಬದಲಾವಣೆ ಎದುರಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳ ಮೇಲೆ ಗಮನ ಕೇಂದ್ರೀಕರಿಸಲು ಬಯಸಿದ್ದೇನೆ' ಎಂದೂ ಹೇಳಿದ್ದಾರೆ.

                ಇದಕ್ಕೂ ಮೊದಲು, ಪೂರ್ವ ದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌, 'ಕ್ರಿಕೆಟ್‌ ಸಂಬಂಧಿತ ಕೆಲಸಗಳ ಮೇಲೆ ಗಮನಕೇಂದ್ರೀಕರಿಸುವ ಸಲುವಾಗಿ ಪಕ್ಷದ ರಾಜಕೀಯ ಕರ್ತವ್ಯಗಳಿಂದ ತನ್ನನ್ನು ಮುಕ್ತಗೊಳಿಸುವಂತೆ ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ' ಎಂದು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದರು.

              ಗಂಭೀರ ತಮ್ಮ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಗುರುವಾರ ಭೇಟಿ ಮಾಡಿದ್ದರು. ಅಲ್ಲದೆ, ತಮ್ಮ ಈ ದಿಢೀರ್‌ ನಡೆಗೂ ಕೆಲ ತಾಸು ಮೊದಲು, ಬಿಜೆಪಿಗೆ ತಾವು ನೀಡಿದ ದೇಣಿಗೆಯ ರಸೀದಿಯ ಚಿತ್ರವನ್ನು 'ಎಕ್ಸ್‌'ನಲ್ಲಿ ಹಂಚಿಕೊಂಡು, 'ವಿಕಸಿತ ಭಾರತ್' ನಿರ್ಮಾಣ ಪ್ರಧಾನಿ ಮೋದಿಯವರ ದೂರದೃಷ್ಟಿಯ ಕೊಡುಗೆಯಾಗಿದೆ. ಎಲ್ಲರೂ ಈ ಅಭಿಯಾನದಲ್ಲಿ ಕೈಜೋಡಿಸಿ ಎಂದು ಮನವಿ ಮಾಡಿದ್ದರು.

'ಕಳೆದ ಹತ್ತು ವರ್ಷಗಳಿಂದ ಹಜಾರಿಬಾಗ್‌ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸುವ ಸುಯೋಗ ಹೊಂದಿದ್ದೇನೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನಾಯಕತ್ವದಿಂದ ನನಗೆ ಆಶೀರ್ವಾದ ಮತ್ತು ಅವಕಾಶಗಳು ಸಿಕ್ಕಿವೆ. ಇವರೆಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಗಳು. ಜೈ ಹಿಂದ್' ಎಂದು ಗಂಭೀರ್‌ 'ಎಕ್ಸ್‌' ಪೋಸ್ಟ್‌ನಲ್ಲಿ ಹೇಳಿದ್ದಾರೆ.

                 ಹಲವು ಹೊಸ ನಾಯಕರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿರುವ ಬಿಜೆಪಿ, ಕೆಲವು ಹಾಲಿ ಸಂಸದರಿಗೆ ಪಕ್ಷದ ಸಂಘಟನೆಯ ಇತರ ಕೆಲಸಗಳತ್ತ ಗಮನ ಹರಿಸಲು ಸೂಚಿಸಿದೆ ಎನ್ನಲಾಗಿದೆ.

 ಗೌತಮ್‌ ಗಂಭೀರ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries