ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮಿಳುನಾಡಿನ ಕಲ್ಪಾಕ್ಕಂನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದರು.
ಚೆನ್ನೈನಿಂದ ಸುಮಾರು 60 ಕಿಮೀ ದೂರದಲ್ಲಿರುವ ಕಲ್ಪಾಕ್ಕಂನಲ್ಲಿ ದೇಶಿ ನಿರ್ಮಿತ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅಳವಡಿಸಿಕೊಂಡು ಕಾರ್ಯಾರಂಭ ಮಾಡಿರುವ 'ಕೋರ್ ಲೋಡಿಂಗ್' ಅನ್ನು ಪ್ರಧಾನಿ ಸಮ್ಮುಖದಲ್ಲಿ ಪ್ರಾರಂಭಿಸಲಾಯಿತು.
ಈ 500 ಮೆಗಾ ವ್ಯಾಟ್ ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ಭಾರತೀಯ ನಾಭಿಕಿಯಾ ವಿದ್ಯುತ್ ನಿಗಮ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.
ರಿಯಾಕ್ಟರ್ ಕೋರ್ ಕಂಟ್ರೋಲ್ ಸಬ್ ಅಸೆಂಬ್ಲಿ, ಬ್ಲಾಂಕೆಟ್ ಸಬ್ ಅಸೆಂಬ್ಲಿ ಮತ್ತು ಫ್ಯೂಯಲ್ ಸಬ್ ಅಸೆಂಬ್ಲಿಗಳನ್ನು ಒಳಗೊಂಡಿದೆ.
ಈ ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೇರಿದಂತೆ ಇತರರು ಪ್ರಧಾನಿ ಮೋದಿ ಜೊತೆಗಿದ್ದರು.