ಬದಿಯಡ್ಕ: ಚಿನ್ಮಯ ಮಿಶನ್ ಸಂಸ್ಥಾಪಕರಾದ ಚಿನ್ಮಯಾನಂದ ಸ್ವಾಮೀಜಿಯವರ 108ನೇ ಜಯಂತಿಯ ಪ್ರಯುಕ್ತ ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ವಸ್ತುಪ್ರದರ್ಶನ ಮತ್ತು ಕೆಜಿ ಡೇ ಆಚರಿಸಲಾಯಿತು.
ಕೇರಳ ಚಿನ್ಮಯ ಮಿಶನ್‍ನ ಮುಖ್ಯಸ್ಥರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಸರ್ವತೋಮುಖವಾಗಿ ಪ್ರಗತಿಯನ್ನು ಹೊಂದಲು ಅವರನ್ನು ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಮಾಡಬೇಕು. ಅಧ್ಯಾಪಕರೊಂದಿಗೆ ಹೆತ್ತವರು ಬೆಂಬಲವಾಗಿ ನಿಂತಾಗ ಅದು ಮಕ್ಕಳ ಬೆಳವಣಿಗೆಗೆ ಕಾರಣವಾಗುತ್ತದೆ. ಮಕ್ಕಳು ಮಾನಸಿಕ ದೃಢತೆಯನ್ನು ಹೊಂದಲು ಸಾಧ್ಯವಿದೆ. ಏನನ್ನಾದರೂ ಸಾಸುವ ಛಲ ಅವರದ್ದಾಗಬೇಕು ಎಂದು ಹಿತನುಡಿಗಳನ್ನಾಡಿದರು.
ಶಾಲಾ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ, ಮುಖ್ಯೋಪಾಧ್ಯಾಯಿನಿ ಮಾನಸ ಉಪಸ್ಥಿತರಿದ್ದರು. ಪೂರ್ವಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಜರಗಿತು. ಶಾಲಾ ವಿದ್ಯಾರ್ಥಿನಿ ಸ್ವಸ್ತಿ ಕಾರ್ಯಕ್ರಮ ನಿರೂಪಿಸಿದಳು. ಪ್ರಾರ್ಥನಾಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ಶಾಂತಿಮಂತ್ರದೊಂದಿಗೆ ಮುಕ್ತಾಯವಾಯಿತು.