ಅಲೋವೆರಾ ಸೌಂದರ್ಯವರ್ಧಕರಿಗೆ ಅಗತ್ಯ-ಅನಿವಾರ್ಯ ಸಸ್ಯವಾಗಿದೆ. ಅಲೋವೆರಾ ಎಣ್ಣೆ ಕೂಡ ಕೂದಲು ಉದುರುವಿಕೆಗೆ ಉತ್ತಮ ಪರಿಹಾರವಾಗಿದೆ.
ನೆತ್ತಿಯನ್ನು ತಂಪಾಗಿಸುವುದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವವರೆಗೂ ಮತ್ತು ಮುಖವನ್ನು ಶುದ್ದಗೊಳಿಸಲೂ ಇದು ಅತ್ಯಪೂರ್ವ ಸಸ್ಯ. ಅಲೋವೆರಾ ವಿಟಮಿನ್ ಇ ಸಮೃದ್ಧವಾಗಿರುವ ಪ್ರಮುಖ ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ.
ಹೇಗೆ ಮಾಡುವುದು?:
ಅಲೋವೆರಾದ ಎಲೆಗಳಿಂದ ಲೋಳೆ ರಸವನ್ನು ಹೊರತೆಗೆಯಲಾಗುತ್ತದೆ. ಮಧ್ಯಮ ಗಾತ್ರದ ಅಲೋವೆರಾ ಕಾಂಡವನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ಸಣ್ಣ ತುಂಡುಗಳಾಗಿ ಪುಡಿಮಾಡಿ.
ಚೆನ್ನಾಗಿ ತಣಿದ ನಂತರ ಈ ರಸವನ್ನು ಜರಡಿಯಲ್ಲಿ ತೆಗೆದುಕೊಂಡು ಚೆನ್ನಾಗಿ ಸೋಸಬಹುದು. ಒಂದು ಕಪ್ ಅಲೋವೆರಾ ಜ್ಯೂಸ್ ಮತ್ತು ಅರ್ಧ ಕಪ್ ತೆಂಗಿನ ಎಣ್ಣೆ ನಿಮಗೆ ಇಲ್ಲಿ ಬೇಕಾಗುತ್ತದೆ.
ಹೀಗೆ ತೆಗೆದ ತೆಂಗಿನೆಣ್ಣೆಯು ಕಲಬೆರಕೆ ರಹಿತವಾಗಿರಬೇಕು. ಈಗ ಅದನ್ನು ದಪ್ಪ ಪಾತ್ರೆಯಲ್ಲಿ ಬಿಸಿ ಮಾಡಿ ಮತ್ತು ಅದಕ್ಕೆ ಅಲೋವೆರಾ ರಸವನ್ನು ಸುರಿಯಿರಿ.
ತೆಂಗಿನ ಎಣ್ಣೆಯಲ್ಲಿ ಅಲೋವೆರಾ ರಸವನ್ನು ಸುರಿದ ನಂತರ, ಅದನ್ನು 10 ನಿಮಿಷಗಳ ಕಾಲ ಬೆರೆಸಿ. ಹೀಗೆ ಕದಡುವಾಗ ಅನುಪಯೋಗಿ ವಸ್ತುಗಳು ಎಣ್ಣೆಯ ಮೇಲೆ ತಾನಾಗಿಯೇ ಹೊರಬರುತ್ತದೆ.
ಅದರ ನಂತರ, ಎಣ್ಣೆ ಸ್ಪಷ್ಟವಾದಾಗ, ಅದನ್ನು ಒಲೆಯಿಂದ ತೆಗೆಯಬಹುದು. ಇದರ ನಂತರ, ಅದು ಚೆನ್ನಾಗಿ ತಣ್ಣಗಾದಾಗ, ಅದನ್ನು ಬಾಟಲಿಗೆ ಸುರಿಯಬಹುದು.
ಹೇಗೆ ಬಳಸುವುದು: ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಈ ಎಣ್ಣೆಯನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ. ನಂತರ ನೀವು ಸ್ನಾನ ಮಾಡಬೇಕು.