ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ತ್ರೈಮಾಸಿಕ ಸಭೆಯು ಕಾಸರಗೊಡಿನ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರುಗಿತು. ಧಾರ್ಮಿಕ ಮುಂದಾಳು ಭಜನಾ ಪರಿಷ್ ಅಧ್ಯಕ್ಷ ಕೆ ಎನ್ ವೆಂಕಟ್ರಮಣ ಹೊಳ್ಳ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ ವಲಯ ಮಟ್ಟದ ಹಾಗೂ ತಾಲೂಕು ಮಟ್ಟದ ಸಮಿತಿ ರಚನೆಯ ರೂಪು ರೇಷೆಗಳ ಬಗ್ಗೆ ಚರ್ಚಿಸಿ ವರ್ಷದಲ್ಲಿ ತಿಂಗಳ ಭಜನೆ, ಮನೆಮನೆ ಭಜನೆ ಹಾಗೂ ಭಜನಾ ಪರಿಷತ್ತನ್ನು ಕ್ರೀಯಾಶೀಲವನ್ನಾಗಿಸು ಸಿಟ್ಟಿನಲ್ಲಿ ಚರ್ಚಿಸಲಾಯಿತು. ಭಜನಾ ಪರಿಷತ್ ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್, ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ಶ್ರೀಮಾನ್ ಶ್ರೀನಿವಾಸ ಯೋಜನಾಧಿಕಾರಿಯವರು ಕೇಂದ್ರ ಕಚೇರಿ, ಪುರುಷೋತ್ತಮ ಬಂದಡ್ಕ ಮಾಜಿ ಅಧ್ಯಕ್ಷರು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮುಕೇಶ್, ಶ್ರೀ ಧರ್ಮಸ್ಥಳ ಭಜನಾ ಪರಿಷತ್ ದ.ಕ ಜಿಲ್ಲಾ ಸಮನ್ವಯಾಧಿಕಾರಿ ವಾಸುಪೂಜಾರಿ ದ.ಕ.ಜಿಲ್ಲೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಪದ್ಮನಾಭ ಆಚಾರಿ ವಂದಿಸಿದರು.