ಬದಿಯಡ್ಕ: ಎಡನೀರು ಮಠಾಧೀಶ ಶ್ರಿಸಚ್ಚಿದಾನಂದ ಭಾರತೀ ಶ್ರೀಗಳು ಬುಧವಾರ ಶಬರಿಮಲೆ ಸನ್ನಿಧಿಗೆ ಭೇಟಿ ನೀಡಿದರು. ಈ ಸಂದರ್ಭ ಪಡಿಪೂಜೆ ನೆರವೇರಿಸಿ ಮಣಿಕಂಠನ ದರ್ಶನ ಪಡೆದರು. ತಂತ್ರಿವರ್ಯ ಕಂಠಾರರ್ ಮಹೇಶ್ ಮೋಹನರ್, ಕ್ಷೇತ್ರ ಆಡಳಿತಾಧಿಕಾರಿ ಕೃಷ್ಣಕುಮಾರ್,ಮೇಳ್ಶಾಂತಿ ಮಹೇಶ್ ನಂಬೂದಿರಿ ಮೊದಲಾದವರು ಶ್ರೀಗಳನ್ನು ಸ್ವಾಗತಿಸಿ, ಅನುಗ್ರಹ ಪಡೆದರು. ಭೇಟಿಯ ಮಧ್ಯೆ ಹರಿಪ್ಪಾಡ್ ಶ್ರೀಸುಬ್ರಹ್ಮಣ್ಯ ದೇವಾಲಯವನ್ನೂ ಶ್ರೀಗಳು ಸಂದರ್ಶಿಸಿದರು.