ಕೋಝಿಕ್ಕೋಡ್: ಕಾಡೆಮ್ಮೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ನಿನ್ನೆ(ಮಂಗಳವಾರ) ಮಧ್ಯಾಹ್ನ ಕಕ್ಕಾಯತ್ ಎಂಬಲ್ಲಿ ಈ ಘಟನೆ ನಡೆದಿದೆ.
ಕಕ್ಕಯಂ ಮೂಲದ ಪಲಾಟಿ ಅಬ್ರಹಾಂ ಮೃತರು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡೆಮ್ಮೆ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾರೆ.
ಏತನ್ಮಧ್ಯೆ, ತ್ರಿಶೂರ್‍ನ ಪೆರಿಂಗಲ್ಮನಲ್ಲಿ ಕಾಡುಬೆಕ್ಕಿನ ದಾಳಿಯಲ್ಲಿ ಸಮುದಾಯ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ. ವಾಚ್ ಮರಂ ಕಾಲೋನಿಯ ಊರು ಮೂಪ್ಪನ್(ಗುರಿಕ್ಕಾರ ಎಂಬುದಕ್ಕೆ ಸಂವಾದಿ) ರಾಜನ್ ಅವರ ಪತ್ನಿ ವತ್ಸಲಾ (62) ಮೃತರು. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಅರಣ್ಯದಲ್ಲಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಹೋದ ವಯೋವೃದ್ದೆಯ ಮೇಲೆ ಕಾಡುಪ್ರಾಣಿ ದಾಳಿ ಮಾಡಿದೆ. ಮೃತದೇಹವನ್ನು ಕಾಡಿನಿಂದ ಹೊರತರುವ ಪ್ರಯತ್ನ ನಡೆಯುತ್ತಿದೆ.