HEALTH TIPS

ಯುವಶಕ್ತಿ ಹಾಗೂ ಮಾತೃಶಕ್ತಿ ಬಲಿಷ್ಠವಾಗಬೇಕು - ಮಧುಸೂದನ ಆಯರ್: ಪೆರಡಾಲದಲ್ಲಿ ಧಾರ್ಮಿಕ ಸಮಾರಂಭದ ಆಮಂತ್ರಣ ಬಿಡುಗಡೆ

            ಬದಿಯಡ್ಕ: ದುಸ್ತಿತಿಯಲ್ಲಿರುವ ದೇವಾಲಯಗಳು ಜೀರ್ಣೋದ್ಧಾರಗೊಳ್ಳಬೇಕಾದರೆ ದೇವತಾ ಶಕ್ತಿಯ ಪ್ರೇರಣೆಯಿರುತ್ತದೆ. ಯುವಶಕ್ತಿ ಹಾಗೂ ಮಾತೃಶಕ್ತಿ ಎಲ್ಲೆಡೆ ಬಲಿಷ್ಠವಾಗಬೇಕು. ಇಲ್ಲಿ ಯುವಕರ ಒಗ್ಗಟ್ಟು ಶಿವಶಕ್ತಿಯಾಗಿ ಹೊರಹೊಮ್ಮಿದೆ. ಎಲ್ಲರೂ ಮಾಡಬಹುದಾದಂತಹ ದೇವರ ನಾಮಜಪ ಪ್ರತೀ ಮನೆಯಲ್ಲಿ ಅನುರಣಿಸಬೇಕು ಎಂದು ಉದ್ಯಮಿ ಕೊಡುಗೈದಾನಿ ಮಧುಸೂದನ ಆಯರ್ ಮಂಗಳೂರು ಅಭಿಪ್ರಾಯಪಟ್ಟರು.

                ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಶುಕ್ರವಾರ ಪೆರಡಾಲ ಶ್ರೀ ಉದನೇಶ್ವರ ಶ್ರೀಕ್ಷೇತ್ರದ ಸಭಾ ಭವನದಲ್ಲಿ ಜರಗಿದ ಮೇ 1ರಂದು ನಡೆಯಲಿರುವ ಜೀರ್ಣೋದ್ಧಾರ ನಿಧಿ ಕೂಪನ್ ಡ್ರಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

           ಹಿರಿಯ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಧುಸೂದನ ಬಾಯಾರು, ರಾಜೇಶ್ ಮಾಸ್ತರ್ ಅಗಲ್ಪಾಡಿ, ಮಾಜಿ ಮೊಕ್ತೇಸರರುಗಳಾದ ಚಂದ್ರಹಾಸ ರೈ ಪೆರಡಾಲಗುತ್ತು, ವೆಂಕಟಕೃಷ್ಣ ಭಟ್ ಮಕ್ಕಿಕ್ಕಾನ, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ರೈ ಪೆರಡಾಲಗುತ್ತು ವಂದಿಸಿದರು. ಗಣೇಶ್ ಭಟ್ ಕಡಪ್ಪು, ವಿ.ಬಿ.ಪಟ್ಟಾಜೆ, ಭಾಸ್ಕರ ಬಿ. ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries