ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪುನರಾಯ್ಕೆ ಬಯಸಿರುವ ಜೋ ಬೈಡನ್, ಗುರುವಾರ ತನ್ನ ಪ್ರತಿಸ್ಪರ್ಧಿ ಮತ್ತು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪುನರಾಯ್ಕೆ ಬಯಸಿರುವ ಜೋ ಬೈಡನ್, ಗುರುವಾರ ತನ್ನ ಪ್ರತಿಸ್ಪರ್ಧಿ ಮತ್ತು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
'ಟ್ರಂಪ್ ಅವರು ಅಮೆರಿಕ ಮತ್ತು ಜಾಗತಿಕವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ರಷ್ಯಾದ ಎದುರು ಮಂಡಿಯೂರಿರುವ ಅವರು ಪ್ರತಿಕಾರ ಮತ್ತು ದ್ದೇಷದ ಮನಸ್ಥಿತಿಯನ್ನು ಬೆಂಬಲಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಅಮೆರಿಕ ಸಂಸತ್ತಿನಲ್ಲಿ ಕೊನೆಯ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಬೈಡನ್ ಟ್ರಂಪ್ ಹೆಸರು ನೇರವಾಗಿ ಉಲ್ಲೇಖಿಸದ ಅವರು, ಸುಮಾರು 1 ಗಂಟೆಯ ಭಾಷಣದಲ್ಲಿ ಸುಮಾರು 13 ಬಾರಿ ಹಿಂದಿನ ಅಧ್ಯಕ್ಷರು ಎಂದು ಉಲ್ಲೇಖಿಸಿದರು.
ಕೊನೆಯ ಅಧಿವೇಶನದ ಹಿಂದೆಯೇ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷ ಸ್ಥಾನದ ಚುನಾವಣೆಗೂ ಸಿದ್ಧತೆ ಆರಂಭವಾದಂತಿದೆ. 81 ವರ್ಷ ವಯಸ್ಸಿನ ಬೈಡನ್, ವಯಸ್ಸಿನಲ್ಲಿ ಅಮೆರಿಕ ಅಧ್ಯಕ್ಷರಲ್ಲಿಯೇ ಹಿರಿಯರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರಿತು, ವಲಸೆ, ಗನ್ ಕಡಿವಾಣ, ಗರ್ಭಪಾತ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿ 77 ವರ್ಷದ ಟ್ರಂಪ್ ನಿಲುವನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡರು.
ಯಾವುದೇ ಅಧ್ಯಕ್ಷ ಅಮೆರಿಕದ ಜನರ ಸೇವೆಗೆ ಬದ್ಧರಾಗಿರಬೇಕು. ಹಿಂದಿನ ಅಧ್ಯಕ್ಷರು ತಮ್ಮ ಪ್ರಾಥಮಿಕ ಕರ್ತವ್ಯದಲ್ಲಿಯೇ ವಿಫಲರಾಗಿದ್ದರು. ಇದು, ಕ್ಷಮಿಸಲಾಗದ್ದು ಎಂದು ಬೈಡನ್ ಟೀಕಿಸಿದರು.