ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯ ಕಲೋತ್ಸವದ ತೀರ್ಪು ನೀಡಲು ಲಂಚ ಪಡೆದ ಆರೋಪದ ಮೇಲೆ ಮೂವರು ತೀರ್ಪುಗಾರರನ್ನು ಬಂಧಿಸಲಾಗಿದೆ.
ಶಾಜಿ, ಜಿಬಿನ್ ಮತ್ತು ಜೋಮೆಟ್ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ವಿಶ್ವವಿದ್ಯಾನಿಲಯ ಒಕ್ಕೂಟವು ತೀರ್ಪುಗಾರರ ವಿರುದ್ಧ ದೂರು ದಾಖಲಿಸಿತ್ತು. ಆದರೆ ತೀರ್ಪುಗಾರರು ತಮ್ಮನ್ನು ವೃಥಾ ಸಿಲುಕಿಸಲಾಗಿದೆ ಎಂದು ಹೇಳುತ್ತಾರೆ. ಭ್ರಷ್ಟಾಚಾರ ಆರೋಪದಿಂದ ಸ್ಥಗಿತಗೊಂಡಿದ್ದ ಕಲೋತ್ಸವ ಮತ್ತೆ ಆರಂಭವಾಗಿದೆ.
ಮೊನ್ನೆ ನಡೆದ ಮಾರ್ಗಂಕಳಿ ಸ್ಪರ್ಧೆಯಲ್ಲಿ ಲಂಚದ ಆರೋಪ ಕೇಳಿಬಂದಿತ್ತು. ಈ ಹಿಂದೆ ಕಲೋತ್ಸವದ ಹೆಸರು ವಿವಾದಕ್ಕೀಡಾಗಿತ್ತು. ಎಸ್‍ಎಫ್‍ಐ ನೇತೃತ್ವದ ಯುನಿವರ್ಸಿಟಿ ಯೂನಿಯನ್ ಆರ್ಟ್ ಫೆಸ್ಟಿವಲ್‍ಗೆ ಪ್ಯಾಲೆಸ್ತೀನ್ ಭಯೋತ್ಪಾದನೆಗೆ ಸಂಬಂಧಿಸಿದ ಇಂತಿಹಾದ್ ಎಂಬ ಹೆಸರನ್ನು ನೀಡಿ ವಿವಾದ ಎಬ್ಬಿಸಿತ್ತು. ನಿಲಮೇಲ್ ಎನ್‍ಎಸ್‍ಎಸ್‍ನ ಎಬಿವಿಪಿ ಕಾರ್ಯಕರ್ತರೊಬ್ಬರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ ನಂತರ ಉಪಕುಲಪತಿಗಳು ಹೆಸರನ್ನು ಬದಲಾಯಿಸಲು ಆದೇಶಿಸಿದರು.