HEALTH TIPS

ಲೋಕಸಭೆ ಚುನಾವಣೆ: ಟೈಮ್ಸ್​ ನೌ-ಇಟಿಜಿ ಸಮೀಕ್ಷೆ ವರದಿ ಪ್ರಕಟ; ಬಿಜೆಪಿ ಮೇಲುಗೈ

              ವದೆಹಲಿ: ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ದಿನಾಂಕ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ವರದಿ ಪ್ರಕಟವಾಗಿದ್ದು, ಈ ಕ್ಷಣ ದೇಶದಲ್ಲಿ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 358-398 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.


             ಇಟಿಜಿ ಜತೆಗೂಡಿ ಟೈಮ್ಸ್​ ನೌ ಸುದ್ದಿ ವಾಹಿನಿ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ 358-398 ಸ್ಥಾನ ಮತ್ತು ಒಕ್ಕೂಟಕ್ಕೆ 110-130, ವೈಎಸ್‌ಆರ್‌ಸಿಪಿ 21-22, ಬಿಜೆಡಿ 10-11, ಇತರರು 11-15 ಸ್ಥಾನ ಗೆಲ್ಲಲಿದೆ ಎಂದು ಪ್ರಕಟವಾಗಿರುವ ವರದಿಯಲ್ಲಿ ತಿಳಿಸಲಾಗಿದೆ.

           ಪ್ರಕಟವಾಗಿರುವ ವರದಿ ಅನ್ವಯ ಪಶ್ಚಿಮ ಬಂಗಾಳದಲ್ಲಿ ಎನ್‌ಡಿಎ 20-24, ಟಿಎಂಸಿ 17-21, ಇಂಡಿಯಾ 0-2, ತಮಿಳುನಾಡು ಇಂಡಿಯಾ 29-35, ಬಿಜೆಪಿ 2-6, ಎಐಎಡಿಎಂಕೆ 1-3, ಆಂಧ್ರಪ್ರದೇಶ ವೈಎಸ್‌ಆರ್‌ ಕಾಂಗ್ರೆಸ್‌ 21-22, ಟಿಡಿಪಿ-ಜನಸೇನಾ 3-4, ಮಹಾರಾಷ್ಟ್ರ ಎನ್‌ಡಿಎ 34-38, ಇಂಡಿಯಾ 9-13, ಮಧ್ಯಪ್ರದೇಶ ಬಿಜೆಪಿ-28-29, ಇಂಡಿಯಾ 0-1, ರಾಜಸ್ಥಾನ ಬಿಜೆಪಿ 20-24, ಇಂಡಿಯಾ 0-1, ಬಿಹಾರ ಎನ್‌ಡಿಎ 34-39, ಇಂಡಿಯಾ 0-2, ಜಾರ್ಖಂಡ್‌ ಎನ್‌ಡಿಎ 12-14, ಇಂಡಿಯಾ 0-2, ಒಡಿಶಾ ಬಿಜೆಪಿ 10-11, ಬಿಜೆಡಿ 10-11, ಇಂಡಿಯಾ 0-1 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.

              2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಲಾಗಿದೆ. ಆದರೆ, ವಿಪಕ್ಷ ಕಾಂಗ್ರೆಸ್​ ಕಳೆದ ಭಾರಿಗಿಂತ ಕಡಿಮೆ ಸ್ಥಾನ ಗೆಲ್ಲಲಿದೆ ಎಂದು ಪ್ರಕಟವಾಗಿರುವ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಇನ್ನಷ್ಟೇ ದಿನಾಂಕವನ್ನು ಪ್ರಕಟಿಸಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries