ತಿರುವನಂತಪುರಂ: ವೈದ್ಯಕೀಯ ಕಾಲೇಜಿನ ಯುವ ಮಹಿಳಾ ವೈದ್ಯೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಿರುವನಂತಪುರಂನ ಅರುವಿಕಾರ ವೆಲ್ಲನಾಡು ಮೂಲದ ವೈದ್ಯೆ ಅಭಿರಾಮಿ ಬಾಲಕೃಷ್ಣನ್ ಮೃತರಾದವರು.
ಅಭಿರಾಮಿ ಸೀನಿಯರ್ ರೆಸಿಡೆಂಟ್ ವೈದ್ಯೆ. ವೈದ್ಯರು ಮೆಡಿಕಲ್ ಕಾಲೇಜು ಸಮೀಪದ ಪಿ.ಟಿ.ಚಾಕೋ ನಗರದ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅರಿವಳಿಕೆ ಔಷಧಿಯ ಮಿತಿಮೀರಿದ ಸೇವನೆಯೇ ಸಾವಿಗೆ ಕಾರಣ ಎಂಬುದು ಪ್ರಾಥಮಿಕ ತೀರ್ಮಾನ. ಪೋಲೀಸ್ ತನಿಖೆ ನಡೆಯುತ್ತಿದೆ.