ಶ್ರೀನಗರ: ಒಬ್ಬ ಪಾಕಿಸ್ತಾನಿ ಸೇರಿದಂತೆ ನಾಲ್ವರು ಭಯೋತ್ಪಾದಕರ ವಿರುದ್ಧ ರಾಜ್ಯ ಗುಪ್ತದಳ ವಿಭಾಗವು (ಎಸ್‌ಐಯು) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಎನ್‌ಐಎ (ರಾಷ್ಟ್ರೀಯ ತನಿಖಾ ಏಜೆನ್ಸಿ) ನ್ಯಾಯಾಲಯದಲ್ಲಿ ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಎಹ್ಸಾನ್ ಉಲ್ ಹಕ್ ಶೇಕ್, ಒವೈಸಿ ಫಿರೋಜ್ ಮಿರ್ (ಸದ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದಾನೆ) ಮತ್ತು ಪಾಕಿಸ್ತಾನದ ಅಬ್ರಾರುಲ್ ಇಸ್ಲಾಮ್ ಹಾಗೂ ಕಸ್ಟಡಿಯಲ್ಲಿರುವ ಇಷ್ತಿಯಾಕ್ ನಾಜಿರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಮತ್ತೊಬ್ಬ ಆರೋಪಿ ಅಬ್ಬಾಸ್ ಮಜೀದ್ ಪಾರೆ ವಿರುದ್ಧ ಕಳೆದ ಡಿಸೆಂಬರ್‌ನಲ್ಲೇ ಎಸ್‌ಐಯು ದೋಷಾರೋಪ ಪಟ್ಟಿ ಸಲ್ಲಿಸಿತ್ತು.