ಕುಂಬಳೆ: ಆರಿಕ್ಕಾಡಿ ಪಾರೆಸ್ಥಾನ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರ ವಾರ್ಷಿಕ ಕಳಿಯಾಟ ಮಹೋತ್ಸವ ಮಾ. 30ರಿಂದ ಏ. 6ರ ವರೆಗೆ ಜರುಗಲಿದೆ. 30ರಂದು ಸಂಜೆ 4ಕ್ಕೆ ಚಪ್ಪರ ಮುಹೂರ್ತ, ದೀಪ ಪ್ರತಿಷ್ಠೆ, ರಾತ್ರಿ 10ಕ್ಕೆ ಭಂಡಾರದ ಆಗಮನ, 31ರಂದು ಬೆಳಗ್ಗೆ 4ರಿಂದ ಭಗವತೀ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ, ಬಲಿ, ಬಿಂಬ ದರ್ಶನ ನಡೆಯುವುದು. 5ಕ್ಕೆ ಧ್ವಜಾರೋಹಣ, ಸಂಜೆ 6ಕ್ಕೆ ಪುಳ್ಳಿ ಪೂವಣ್ಣ ದೈವದ ವೆಳ್ಳಾಟ, ಭಜನೆ, ರಾತ್ರಿ 9ಕ್ಕೆ ಅಣಙï ಭೂತಂ, ಪುಳ್ಳಿಪೂವಣ್ಣ ದೈವದ ಕೋಲ, ಯಲ್ಲಾಪುರತ್ ಭಗವತೀ ಕೋಲ ನಡೆಯುವುದು.
ಏ. 1ರಂದು ಬೆಳಗ್ಗೆ 4ಕ್ಕೆ ಭಗವತೀ ದರ್ಶನ, ಸಂಜೆ 7ಕ್ಕೆ ವೀರಪುತ್ರನ್ ದೈವದ ವೆಳ್ಳಾಟ, ರಾತ್ರಿ 9ಕ್ಕೆ ವಿವಿಧ ದೈವಗಳ ಕೋಲ ನಡೆಯುವುದು. 2ರಂದು ಬೆಳಗ್ಗೆ 8ರಿಂದ ಮೊದಲ ಕಳಿಯಾಟ ನಡೆಯುವುದು. ವೀರಪುತ್ರನ್, ಮಲಯಾಂ ಚಾಮುಂಡಿ ಕೋಲ ನಡೆಯುವುದು. ಸಂಜೆ 7ರಿಂದ ಕರಿವಿಲ್ ದೈವ, ಕನ್ನಿಮುರುಗನ್ ದೈವ, ವೇಟಕರುಮಗನ್, ವೀರಪುತ್ರನ್ ದೈವದ ವೆಳ್ಳಾಟ ನಡೆಯುವುದು. ಭಗವತೀ ದರ್ಶನ, ಕೆಂಡಸೇವೆ, ಉರುಳು ಸೇವೆ, ಶ್ರೀ ಭಗವತೀ ದೈವದ ಕುಳಿಚ್ಚಾಟ ನಡೆಯುವುದು. 3ರಂದು ನಡುಕಳಿಯಾಟ, ಕನ್ನಿಮುರುಗನ್ ದೈವ, ಕರುವಿಲ್ಲು ದೈವದ ಕೋಲ, ಚಾಮುಂಡಿ ದೈವದ ಕೋಲ ನಡೆಯುವುದು.
ಏ. 4ರಂದು ಬೆಳಗ್ಗೆ 6ಕ್ಕೆ ಆಲಿಭೂತ, 10ಕ್ಕೆ ಭಗವತೀ ದರ್ಶನ, ರಾತ್ರಿ 8ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಠಲನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, 9.30ರಿಂದ ದೈವಗಳ ವೆಳ್ಳಾಟ, ಭಗವತೀ ದರ್ಶನ, ಉರುಳು ಸೇವೆ, ದೈವಗಳ ಕುಳಿಚ್ಚಾಟ ನಡೆಯುವುದು. 5ರಂದು ಬೆಳಗ್ಗೆ 6.30ಕ್ಕೆ ಆಲಿಭೂತ, ಮಲಯಾಳಂ ಚಾಮುಂಡಿ ದೈವದ ಕೋಲ, ವೇಟಕರುಮಗನ್ ದೈವದ ಕೋಲ ನೆಯುವುದು.
ಏ. 6ರಂದು ಬೆಳಗ್ಗೆ 6.30ಕ್ಕೆ ಶ್ರೀ ಆಲಿಭೂತ, ಮಲಯಾಳ ಚಾಮುಂಡಿ, ವೀರಪುತ್ರನ್ ದೈವದ ಕೋಲ, ಸಂಜೆ 5ಕ್ಕೆ ಭಗವತೀ ದರ್ಶನ, ಕೆಂಡಸೇವೆ, ಬಿಂಬದರ್ಶನ, ಪಾಡಾರ್‍ಕುಳಂಗರ ಭಗವತೀ(ಹೂಮುಡಿ), ಮಂತ್ರಮೂರ್ತಿ, ಆಲಿಭೂತ, ಕಲಶಪ್ರದಕ್ಷಿಣೆ, 6.30ಕ್ಕೆ ಧ್ವಜಾವರೋಹಣ , ರಾತ್ರಿ 10ಕ್ಕೆ ಭಂಡಾರದ ನಿರ್ಗಮನವಾಗುವುದು.