ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿ ಒಂದಲ್ಲಾ ಒಂದು ಅನಾರೋಗ್ಯ ಸಮಸ್ಯೆಯಿಂದ ಬಳಸುತ್ತಿರುತ್ತಾರೆ. ಅದರಲ್ಲೂ ಕೆಲವರು ಯಾವ ರೋಗಕ್ಕೆ ತುತ್ತಾಗಿದ್ದಾರೆ ಎಂಬುದು ತಿಳಿಯಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರಲ್ಲಿ ರೋಗದ ಲಕ್ಷಣವಿದ್ದರೂ ಅವರಿಗೆ ಅದು ಕಾಯಿಲೆಯ ಆರಂಭಿಕ ಹಂತ ಎಂಬುದು ತಿಳಿಯುವಾಗ ತಡವಾಗಿರುತ್ತದೆ.
ಅದರಲ್ಲೂ ಕ್ಯಾನ್ಸರ್‌ನಂತಹ ಕಾಯಿಲೆಯಲ್ಲಿ ಈ ರೀತಿಯಾಗುವುದು ಹೆಚ್ಚು. ಇನ್ನು ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯುವ ಹೊಟ್ಟೆಯ ಹುಣ್ಣು ಅಥವಾ ಹೊಟ್ಟೆಯ ಅಲ್ಸರ್ ಸಹ ಹಲವರಲ್ಲಿ ಇದ್ದರೂ ಅವರಿಗೆ ರೋಗ ಇದೆ ಎಂದು ಗುರುತಿಸುವುದು ಕಷ್ಟವಾಗಲಿದೆ. ಹಾಗಾದರೆ ನಾವಿಂದು ಹೊಟ್ಟೆಯ ಅಲ್ಸರ್ ಹೇಗೆ ಉಂಟಾಗುತ್ತದೆ. ಅದರ ಲಕ್ಷಣವೇನು? ಅದಕ್ಕಿರುವ ಚಿಕಿತ್ಸೆ ಏನು ಎಂಬುದನ್ನು ನೋಡೋಣ.ಗ್ಯಾಸ್ಟ್ರಿಕ್ ಅಲ್ಸರ್‌ನ ಲಕ್ಷಣಗಳೇನು?
ನಿರಂತರ ಹೊಟ್ಟೆ ನೋವು
ಗ್ಯಾಸ್ಟ್ರಿಕ್ ಹುಣ್ಣುಗಳು ಹೊಟ್ಟೆ ನೋವನ್ನು ಉಂಟುಮಾಡುತ್ತವೆ. ಯಾವಾಗಲೂ ಹೊಟ್ಟೆ ನೋವು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಇದು ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಉಂಟು ಮಾಡುತ್ತದೆ. ಆದರೆ ಹೊಟ್ಟೆ ನೋವು ಕಾಣಿಸಿಕೊಂಡಾಗ ನೀವು ಸಾಧಾರಣ ಮಾತ್ರೆ ಸೇವಿಸಿದಾಗ ಈ ಹುಣ್ಣು ಮತ್ತಷ್ಟು ಉಲ್ಬಣವಾಗಲು ಕಾರಣವಾಗುತ್ತದೆ. ಜೊತೆಗೆ ಹೊಟ್ಟೆ ಉರಿಯುವ ಅನುಭವವಾಗುತ್ತದೆ.
ಏಕಾಏಕಿ ತೂಕ ಇಳಿಕೆ
ನೀವು ಚೆನ್ನಾಗಿ ಆಹಾರ ಸೇವಿಸಿದಾಗಲೂ ಏಕಾಏಕಿ ತೂಕ ಇಳಿಯುತ್ತಿದ್ದರೆ ಅದು ಹೊಟ್ಟೆಯ ಅಲ್ಸರ್‌ನ ಸಂಕೇತವಾಗಿದೆ. ಹೊಟ್ಟೆಯ ಹುಣ್ಣುಗಳು ನಿಮಗೆ ಕಡಿಮೆ ಹಸಿವನ್ನು ಉಂಟುಮಾಡಬಹುದು ಏಕೆಂದರೆ ತಿನ್ನುವುದು ನೋವು ಹೆಚ್ಚಿಸುತ್ತದೆ. ನಿಮ್ಮ ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುವುದನ್ನು ನಿಲ್ಲಿಸಬಹುದು. ಆದ್ದರಿಂದ, ನಿಮ್ಮ ಆಹಾರ ಅಥವಾ ವ್ಯಾಯಾಮದ ದಿನಚರಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಪ್ರಮಾಣದಲ್ಲಿ ಸಂಖ್ಯೆಗಳು ಕಡಿಮೆಯಾಗುತ್ತಿದ್ದರೆ, ವೈದ್ಯರ ಭೇಟಿಯಾಗುವುದು ಉತ್ತಮ.
ಅಜೀರ್ಣ ಅಥವಾ ಎದೆಯುರಿ
ಕೆಲವೊಮ್ಮೆ, ನಿಮ್ಮ ಆಹಾರವು ಸರಿಯಾಗಿ ಜೀರ್ಣವಾಗುತ್ತಿಲ್ಲ ಎಂದು ನಿಮಗೆ ಅನಿಸಬಹುದು ಅಥವಾ ತಿಂದ ನಂತರ ನಿಮ್ಮ ಎದೆ ಉರಿಯ ಅನುಭವವಾಗಬಹುದು. ಇವುಗಳು ಅಜೀರ್ಣ ಅಥವಾ ಎದೆಯುರಿ ಚಿಹ್ನೆಗಳು ಮತ್ತು ಅವು ಗ್ಯಾಸ್ಟ್ರಿಕ್ ಅಲ್ಸರ್ನಿಂದ ಉಂಟಾಗಬಹುದು. ನೀವು ಆಗಾಗ್ಗೆ ಆಂಟಾಸಿಡ್ಗಳನ್ನು ತೆಗೆದುಕೊಳ್ಳುತ್ತಿದ್ದರೆ ಆದರೆ ಇನ್ನೂ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ, ಅಜೀರ್ಣವಾಗಿದ್ದರೆ ಇದೂ ಸಹ ಹೊಟ್ಟೆ ಅಲ್ಸರ್ ಲಕ್ಷಣವಿರಬಹುದು.
ವಾಕರಿಕೆ ಮತ್ತು ವಾಂತಿ
ನಿಮ್ಮ ಹೊಟ್ಟೆಯಲ್ಲಿ ಏನೋ ಸರಿ ಇಲ್ಲ ಎಂಬ ಭಾವನೆ ಹಾಗೂ ಆಹಾರ ಸೇವಿಸಿದ ಬಳಿಕ ವಾಕರಿಕೆ ಬರುವುದು, ವಾಂತಿ ಬಂದಂತಾಗುವುದು ಅಲ್ಸರ್‌ನ ಲಕ್ಷಣವಾಗಿರುತ್ತದೆ. ಜೊತೆಗೆ ವಾಂತಿಯಾದಾಗ ಅದರಲ್ಲಿ ರಕ್ತ ಬರಬಹುದು.
ಆಯಾಸ ಅಥವಾ ಸುಸ್ತು
ನೀವು ಅಸಾಧಾರಣವಾಗಿ ದಣಿವು ಅಥವಾ ದುರ್ಬಲತೆಯನ್ನು ಅನುಭವಿಸುತ್ತಿದ್ದರೆ, ಇದು ಗ್ಯಾಸ್ಟ್ರಿಕ್ ಅಲ್ಸರ್‌ನ ಸಂಕೇತವಾಗಿರಬಹುದು, ವಿಶೇಷವಾಗಿ ನೀವು ಹೊಟ್ಟೆ ನೋವು ಅಥವಾ ಅಜೀರ್ಣದಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ. ಹುಣ್ಣುಗಳು ನಿಮ್ಮ ಹೊಟ್ಟೆಯಲ್ಲಿ ನಿಧಾನವಾಗಿ ರಕ್ತಸ್ರಾವವನ್ನು ಉಂಟುಮಾಡಬಹುದು, ಇದು ನಿಮ್ಮ ರಕ್ತದಲ್ಲಿ ಕಡಿಮೆ ಕಬ್ಬಿಣದ ಮಟ್ಟಕ್ಕೆ ಕಾರಣವಾಗುತ್ತದೆ. ಇದರಿಂದ ನೀವು ಸದಾ ಸುಸ್ತಾದಂತೆ. ನಿಶಕ್ತಿಯಾಗುವುದು ಕಂಡುಬರುತ್ತದೆ.