ಕಾಸರಗೋಡು: ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಚುನಾವಣಾ ಪ್ರಚಾರಕ್ಕಾಗಿ ಅಧಿಕೃತ ಸ್ಥಾನಮಾನಗಳನ್ನು ಉಪಯೋಗಿಸಬಾರದು ಎಂದು ಮಾರ್ಗನಿರ್ದೇಶನ ಹೊರಡಿಸಲಾಗಿದೆ.
ಕೇಂದ್ರ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ತಮ್ಮ ಅಧಿಕೃತ ಸ್ಥಾನಮಾನ ಬಳಸಬಾರದು. ಅಧಿಕೃತ ಸ್ಥಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸುವುದು ಮಾದರಿ ನೀತಿ ಸಂಹಿತೆಯ ಪ್ರಕಾರ ನಿಯಮ ಉಲ್ಲಂಘನೆಯಾಗಿದೆ.
ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಜಾಹೀರಾತುಗಳು, ರಾಜಕೀಯ ಸುದ್ದಿಗಳು, ಸಾಧನೆಗಳ ಪ್ರಚಾರ ಮತ್ತು ಪಕ್ಷದ ಭವಿಷ್ಯವನ್ನು ಸುಧಾರಿಸುವುದಕ್ಕಾಗಿ ಪಕ್ಷಪಾತ ಹೇಳಿಕೆಗಳು ಮತ್ತು ಚುನಾವಣಾ ಸಮಯದಲ್ಲಿ ಅಧಿಕೃತ ಮಾಧ್ಯಮಗಳನ್ನು ದುರುಪಯೋಗ ಪಡಿಸುವುದು ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುತ್ತದೆ. ಕುಟುಂಬ ಯೋಜನೆ, ಸಮಾಜ ಕಲ್ಯಾಣ ಯೋಜನೆಗಳು ಇತ್ಯಾದಿಗಳ ಬಗ್ಗೆ ಸಾಮಾನ್ಯ ಮಾಹಿತಿ ಅಥವಾ ಸಾಮಾನ್ಯ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶಕ್ಕಾಗಿ ಸರಕಾರ ನಿರ್ಮಿಸಿದ ಹೋರ್ಡಿಂಗ್‍ಗಳು, ಜಾಹೀರಾತುಗಳು ಇತ್ಯಾದಿಗಳ ಪ್ರದರ್ಶನಕ್ಕೆ ಅನುಮತಿ ಇದೆ.
ಜೀವಂತವಾಗಿರುವ ಯಾವುದೇ ರಾಜಕೀಯ ಕಾರ್ಯಕರ್ತನ ಅಥವಾ ರಾಜಕೀಯ ಪಕ್ಷದ ಸಾಧನೆಗಳನ್ನು ಎತ್ತಿ ತೋರಿಸಲು ಪ್ರಯತ್ನಿಸುವ ಮತ್ತು ಅವರ ಫೆÇೀಟೋಗಳು, ಹೆಸರು ಅಥವಾ ಪಕ್ಷದ ಚಿಹ್ನೆ ಹೊಂದಿರುವ ಎಲ್ಲಾ ಹೋಡಿರ್ಂಗ್‍ಗಳು ಮತ್ತು ಜಾಹೀರಾತುಗಳನ್ನು ತೆಗೆದುಹಾಕಬೇಕು ಅಥವಾ ಮರೆಮಾಡಬೇಕು. ಸಾರ್ವಜನಿಕ ವೆಚ್ಚದಲ್ಲಿ ನಿರ್ಮಿಸಿದ ಈ ಬಗೆಯ ಹೊಡಿರ್ಂಗ್ಸ್ ಗಳು ಮತ್ತು ಜಾಹೀರಾತುಗಳನ್ನು ನಿರಂತರವಾಗಿ ಪ್ರದರ್ಶಿಸುವುದು, ಆ ರೀತಿಯಲ್ಲಿರುವ ಹೋಡಿರ್ಂಗ್ಸ್, ಜಾಹೀರಾತುಗಳು, ಪೆÇೀಸ್ಟರ್ ಗಳನ್ನು ಚುನಾವಣಾ ಪ್ರಚಾರ ದಿನಾಂಕಕ್ಕಿಂತ ಮೊದಲು ಸ್ಥಾಪಿಸಿರುವುದಾಗಿದ್ದರೂ ಮಾದರಿ ನಿಯಮ ಸಂಹಿತೆಯ ಪ್ರಕಾರ ನಿಯಮ ಉಲ್ಲಂಘನೆಯಾಗುತ್ತದೆ.
ಯಾವುದೇ ರಾಜಕೀಯ ನಾಯಕರ ಸ್ವ-ಅಭಿಮಾನ ಅಥವಾ ವ್ಯಕ್ತಿ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಖಜಾನೆಯಿಂದ ಖರ್ಚು ಮಾಡುವುದು ಅಥವಾ ಸ್ವೀಕರಿಸುವುದು ಮತ್ತು ಸಾರ್ವಜನಿಕ ವೆಚ್ಚದಲ್ಲಿ ವೈಯಕ್ತಿಕ/ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡುವುದು ಅಪರಾಧವೆಂದು ಪರಿಗಣಿಸಲಾಗುವುದು. ಅಂತಹ ಜಾಹೀರಾತುಗಳಲ್ಲಿ ರಾಜಕೀಯ ನಾಯಕರ ಫೆÇೀಟೋಗಳನ್ನು ತೆಗೆದುಹಾಕಬೇಕು ಅಥವಾ ಅಸ್ಪಷ್ಟಗೊಳಿಸಬೇಕು.
ಚುನಾವಣ ಸಂದರ್ಭದಲ್ಲಿ ಸಾರ್ವಜನಿಕ ಖಜಾನೆಯ ಹಣ ಖರ್ಚು ಮಾಡಿ ದಿನಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸೇರಿದಂತೆ ಇತರ ಮಾಧ್ಯಮಗಳಲ್ಲಿ ರಾಜಕೀಯ ಸುದ್ದಿ ಪ್ರಕಟಿಸುವವರ ವಿರುದ್ಧ ಹಾಗೂ ಚುನಾವಣಾ ಸಂದರ್ಭದಲ್ಲಿ ಸರಕಾರದ ಸಾಧನೆಗಳನ್ನು ಪ್ರಸ್ತಾಪಿಸಿ ಮಾಧ್ಯಮ ಹಾಗೂ ಜನರಲ್ಲಿ ತಪ್ಪು ತಿಳುವಕೆಯನ್ನು ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ವ್ಯಾಪ್ತಿಯಲ್ಲಿ ಬರುತ್ತದೆ. ಇದರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.