ಇಸ್ಲಾಮಾಬಾದ್: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಕಿರಿಯ ಪುತ್ರಿ ಆಸೀಫಾ ಭುಟ್ಟೊ ಅವರು ರಾಜಕೀಯ ಪ್ರವೇಶಿಸಿದ್ದು, ತಮ್ಮ ತಂದೆ ತೆರವುಮಾಡಿರುವ ಸಿಂಧ್ ಪ್ರಾಂತ್ಯದ ರಾಷ್ಟ್ರೀಯ ಅಸೆಂಬ್ಲಿ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಆಸೀಫಾ ಅವರು ಕೆಲವು ಸಮಯದಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಆಸೀಫಾ ಅವರು ಉಪಚುನಾವಣೆಯ ಉಮೇದುವಾರರಾಗಿ ಭಾನುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಶಾಹೀದ್ ಬೆಂಜಿರಾಬಾದ್ ಕ್ಷೇತ್ರದಲ್ಲಿ ಜರ್ದಾರಿ ಗೆಲುವು ಸಾಧಿಸಿದ್ದರು. ಆದರೆ ಅಧ್ಯಕ್ಷರಾದ ನಂತರ ಅವರು ಕ್ಷೇತ್ರವನ್ನು ತೆರವು ಮಾಡಬೇಕಾಯಿತು. ಉಪ ಚುನಾವಣೆ ಏಪ್ರಿಲ್ 21ಕ್ಕೆ ನಿಗದಿಯಾಗಿದೆ. ಆಸೀಫಾ ಅವರು ಗೆಲುವು ಸಾಧಿಸುವುದು ಖಚಿತ ಎನ್ನಲಾಗಿದೆ.