ಕುಂಬಳೆ: ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ ಅಂಗವಾಗಿ ಬುಧವಾರ ವಿವಿಧ ದೈವಗಳ ನರ್ತನ ಸೇವೆ ನಡೆಯಿತು. ಪುಲ್ಲೂರ್‍ಕಾಳಿ ದೈವ, ಕಣ್ಣಂಗಾಟ್ ಭಗವತೀ ದೈವ, ಪಡಿಞËರ್ ಚಾಮುಂಡಿ ದೈವದ ನರ್ತನ ಸೇವೆ ನಡೆಯಿತು. ನಂತರ ಅಡಿಚ್ಚುತಳಿ ಸ್ತೋತ್ರ, ತಚ್ಚಿಲೋನ್ ದೈವದ ವೆಳ್ಳಾಟ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಪುಲ್ಲೂರ್‍ಕಾಳಿ ದೈವದ ಸ್ತೋತ್ರ, ನರಂಬಿಲ್ ಭಗವತೀ ದೈವದ ಸ್ತೋತ್ರ, ಸಂಜೆ ತಚ್ಚಿಲೋನ್ ಹಾಗೂ ನಾಯನಾರ್ ದೈವಗಳ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ಗಣಪತಿ ಸ್ತೋತ್ರ, ರಾತ್ರಿ ಕೊಡಿ ಎಲೆ ಸ್ತೋತ್ರ, ದರ್ಶನದೊಂದಿಗೆ ಮೆಲೇರಿಗೆ ಕೊಳ್ಳಿ ತಂದು ಅಗ್ನಿಸ್ಪರ್ಶ ನಡೆಸಲಾಯಿತು.
ಇಂದಿನ ಕಾರ್ಯಕ್ರಮ:
7ರಂದು ಬೆಳಗ್ಗೆ 4ಕ್ಕೆ ನರಂಬಿಲ್ ಭಗವತೀ ದೈವದ ನರ್ತನ, 9ಕ್ಕೆ ಪುಲ್ಲೂರ್‍ಕಾಳಿ ದೈದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿಸೇವೆ, ಶ್ರೀ ಮುಚ್ಚಿಲೋಟ್ ಭಗವತೀ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್‍ಕಾಳಿ ದೈವದೊಮದಿಗೆ ಭೇಟಿ, ಪ್ರಸಾದ ವಿತರಣೆ ನಡೆಯುವುದು.