ಮುಳ್ಳೇರಿಯ: ಅಡೂರು ಗ್ರಾಮದ ಕೊರತಿಮೂಲೆ ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ನೀಡುವ 2023-24ನೇ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ವೇತನಕ್ಕೆ ಅಡೂರಿನ ವಿದ್ಯಾಭಾರತೀ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿನಿ ಲಾವಣ್ಯ ಡಿ ಆಯ್ಕೆಯಾಗಿದ್ದಾಳೆ. ಈಕೆ ಪಠ್ಯದ ಜತೆಯಲ್ಲಿ ಗಾಯನ, ನೃತ್ಯ ಹಾಗೂ ಚಿತ್ರಕಲೆಯಲ್ಲೂ ಕೂಡಾ ಚತುರೆಯಾಗಿದ್ದಾಳೆ. ಈಕೆ ಶಾರದಾದೇವಿ ಬೈತನಡ್ಕ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಸುಶ್ಮಿತಾ ಆಚಾರ್ಯ ಅವರಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ.
ಈಕೆ ಅಡೂರಿನ ದೇರಳದ ಹರೀಶ ಡಿ ಹಾಗೂ ಇಂದಿರಾ ಜಿ ಎ ಅವರ ಪುತ್ರಿ. ಈಕೆ 2023ರಲ್ಲಿ ನಡೆದ ವಿದ್ಯಾನಿಕೇತನ ಜಿಲ್ಲಾ ಕಲೋತ್ಸವದಲ್ಲಿ 30ರಲ್ಲಿ 28 ಅಂಕಗಳನ್ನು ಪಡೆದು ಕಲಾಪ್ರತಿಭೆ ಗೌರವ ಪಡೆದಿದ್ದಳು. 2024 ಮಾರ್ಚ್ 29ರಂದು ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.