ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ನೇತೃತ್ವದಲ್ಲಿ ಮಾ.23 ರಂದು ಶನಿವಾರ ಅಪರಾಹ್ನ 3.30 ರಿಂದ ಮಂಜೇಶ್ವರ ಗಿಳಿವಿಂಡು ಆವರಣದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಜನ್ಮದಿನಾಚರಣೆ ಸಮಾರಂಭ ಕವಿ ನಮನ ನಡೆಯಲಿದೆ.
ಸಮಾರಂಭದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಅಧ್ಯಕ್ಷ ಉಮೇಶ ಎಂ. ಸಾಲಿಯಾನ್ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ ಉದ್ಘಾಟಿಸುವರು. ಗೋವಿಂದ ಪೈಗಳ ಬದುಕು ಬರಹ ವಿಷಯದ ಬಗ್ಗೆ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಉಪನ್ಯಾಸ ನೀಡುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಜಯಾನಂದ ಕೆ.ಆರ್, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದೂರು, , ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ್ ಅಡಪ, ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಡಿ.ಜೈತುಳುನಾಡ್ ಕಾಸರಗೋಡು ಘಟಕದ ಅಧ್ಯಕ್ಷೆ ಕುಶಾಲಾಕ್ಷಿ ವಿ. ಕಣ್ವತೀರ್ಥ ಅತಿಥಿಗಳಾಗಿರುವರು. ಮಹಾಕವಿ ಗೋವಿಂದ ಪೈ ಸ್ಮಾರಕ ಸಮಿತಿ ಜೊತೆ ಕಾರ್ಯದರ್ಶಿ ಜಯಂತ ಮಾಸ್ತರ್ ಗ್ರಂಥಾಲಯಕ್ಕೆ ಪುಸ್ತಕ ಸ್ವೀಕಾರ ನಡೆಸುವರು. ಸ್ಮಾರಕ ಸಮಿತಿ ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿಗಾರ್, ಸದಸ್ಯ ಕಮಲಾಕ್ಷ ಕೆ, ವನಿತಾ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ, ಬಹುಭಾಷಾ ಕವಿತಾ ವಾಚನ ನಡೆಯಲಿದೆ.