HEALTH TIPS

ಹಮಾಸ್ ಮಿಷನ್ 'ಇಂತಿಹಾದ್': ಎಸ್‍ಎಫ್‍ಐ ಭಯೋತ್ಪಾದನೆಗೆ ಕುಮ್ಮಕ್ಕು?: ಕೇಂದ್ರೀಯ ಸಂಸ್ಥೆಗಳಿಂದ ತನಿಖೆಗೆ ಸೆನೆಟ್ ಸದಸ್ಯರ ಆಗ್ರಹ

                ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯದ ಯುವಜನೋತ್ಸವಕ್ಕೆ ಇಂತಿಹಾದ್ ಎಂದು ಹೆಸರಿಡಲು ಕಾರಣವೇನು ಎಂಬುದನ್ನು ಸೆನೆಟ್ ಸದಸ್ಯರು ಹೊರತರಲು ಒತ್ತಾಯಿಸಿದ್ದಾರೆ.

                   ಈ ಕುರಿತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಸೆನೆಟ್ ಸದಸ್ಯರು ಮನವಿ ಸಲ್ಲಿಸಿ ಸಮಗ್ರ ತನಿಖೆಗೆ ಒತ್ತಾಯಿಸಿದರು. ಯುವಜನೋತ್ಸವ ಸಂಘಟಕರು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿಯಲ್ಲಿ ಕೋರಲಾಗಿದೆ.

                  ಇಂತಿಹಾದ್ ಎಂಬ ಪದವನ್ನು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಲು ಬಳಸಿತ್ತು. ಇದು ಭಯೋತ್ಪಾದಕ ಪದವಾಗಿದೆ. ಇದು ಕೂಡ ರಕ್ತದಲ್ಲಿ ತೊಯ್ದ ಮಾತು. ಆದ್ದರಿಂದ, ಇದು ಹಿಂಸೆಗೆ ಪ್ರಚೋದನೆಯೇ ಹೊರತು ಬೇರೇನೂ ಅಲ್ಲ. ಭಯೋತ್ಪಾದಕ ಸಂಘಟನೆಗಳು, ಅವರ ಕ್ರೂರ ಕೃತ್ಯಗಳು ಮತ್ತು ಅವರ ನೆಚ್ಚಿನ ಭಯೋತ್ಪಾದಕ ಪದಗಳನ್ನು ಕಾನೂನುಬದ್ಧಗೊಳಿಸಲು ಮತ್ತು ಸಾಮಾನ್ಯಗೊಳಿಸಲು ಯಾವಾಗಲೂ ಹತಾಶ ಪ್ರಯತ್ನಗಳು ನಡೆಯುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

                  'ಇಂತಿಹಾದ್'ನ್ನು ಜಾಗತೀಕರಣಗೊಳಿಸುವುದು ಹಮಾಸ್‍ನ ಧ್ಯೇಯವಾಗಿದೆ. ಎಸ್‍ಎಫ್‍ಐ ಬೆಂಬಲ ನೀಡಿತ್ತು. ಯುವಜನೋತ್ಸವಗಳು ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿವೆ. ವಿದ್ಯಾರ್ಥಿಗಳ ಸೃಜನಶೀಲತೆ, ಸಹಕಾರ, ನಾಯಕತ್ವ, ಸಹೋದರತ್ವ, ರಾಷ್ಟ್ರೀಯತೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 'ಇಂತಿಹಾದ್' ಎಂದಿಗೂ ಕಲೋತ್ಸವದ ಪ್ರಚಾರದ ಪದವಲ್ಲ. ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಸಂಕೇತಿಸುವ ಪದವಲ್ಲ. ಇದು ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಉಗ್ರರನ್ನು ಓಲೈಸುವ ಗಂಭೀರ ಪ್ರಕರಣವಾಗಿದೆ.

            ವಿಶ್ವವಿದ್ಯಾನಿಲಯಗಳು ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು ಭಯೋತ್ಪಾದಕ ಸಂಘಟನೆಗಳ ಹಿಡಿತದಲ್ಲಿವೆ. ಇದೆಲ್ಲದರ ಹಿಂದೆ ಭಯೋತ್ಪಾದಕರ ನಂಟು ಮತ್ತು ಅಂತರಾಷ್ಟ್ರೀಯ ಧನಸಹಾಯವಿದೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವೂ ಆಗಿದೆಷೀ ರೀತಿಯ ನಾಮಕರಣದ ಹಿಂದಿನ ಪ್ರೇರಣೆ ಮತ್ತು ಹಣಕಾಸಿನ ನೆರವು ಸೇರಿದಂತೆ ಪಡೆದ ಬೆಂಬಲವು ಹೊರಬರಬೇಕು. ಇದಕ್ಕೆ ವ್ಯಾಪಕ ತನಿಖೆಯ ಅಗತ್ಯವಿದೆ. ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಮನವಿಯಲ್ಲಿ ಕೋರಲಾಗಿದೆ.

              ಸೆನೆಟ್ ಸದಸ್ಯರಾದ ಡಾ. ವಿನೋದಕುಮಾರ್ ಟಿ.ಜಿ.ನಾಯರ್, ಪಿ.ಶ್ರೀಕುಮಾರ್, ಪಿ.ಎಸ್.ಗೋಪಕುಮಾರ್, ಜಿ.ಸಜಿಕುಮಾರ್, ಅಡ್ವ ವಿ.ಕೆ.ಮಂಜು, ಓ.ಬಿ.ಕವಿತಾ, ಡಾ. ಎಸ್ ಮಿನಿ ವೇಣುಗೋಪಾಲ್, ಡಾ. ಪೋಲ್‍ರಾಜ್, ಡಾ. ಶ್ರೀ ಪ್ರಸಾದ್ ಆರ್, ಡಾ ದಿವ್ಯಾ ಎಸ್ ಆರ್ ಮತ್ತು ಎಸ್ ಶ್ಯಾಮ್ ಲಾಲ್ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries