ಮಂಜೇಶ್ವರ :ಬಿಜೆಪಿ ಮಂಜೇಶ್ವರ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಕೇಂದ್ರ ಫಲನುಭವಿಗಳ ಸಭೆ ಹಾಗೂ ಆಯುಷ್ಮಾನ್ ಅರೋಗ್ಯ ಯೋಜನೆಯ ನೋಂದಣಿ-ಪರಿಶೀಲನೆ ಕಾರ್ಯಾಗಾರ ಹೊಸಬೆಟ್ಟು ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಭಾನುವಾರ ಜರಗಿತು.
ಬಿಜೆಪಿ ಜಿಲ್ಲಾ ಸದಸ್ಯ ಮುರಳಿಧರ ಯಾದವ್ ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಯೋಜನೆಗಳ ಮಾಹಿತಿ ನೀಡಿದರು. ಬಿಜೆಪಿ ಮಂಡಲಾಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹರೀಶ್ ಚಂದ್ರ ಎಂ, ನವೀನ್ ಮಜಲು, ವಿನಯ ಭಾಸ್ಕರ ಉಪಸ್ಥಿತರಿದ್ದರು. ಲಕ್ಷ್ಮಣ ಬಿ ಎಂ ಸ್ವಾಗತಿಸಿ,ಮಾಧವ ವಂದಿಸಿದರು.