HEALTH TIPS

ಜೆಎನ್‌ಯು ಚುನಾವಣೆ: ಎಡ- ಎಬಿವಿಪಿ ನಡುವೆ ತೀವ್ರ ಪೈಪೋಟಿ

            ವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಎಡ ಸಂಘಟನೆಗಳ ಒಕ್ಕೂಟ ಮತ್ತು ಆರ್‌ಎಸ್‌ಎಸ್‌ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಡುವೆ ತೀವ್ರ ಹಣಾಹಣಿ ನಡೆದಿದೆ.

            ಆರಂಭಿಕ ಸುತ್ತುಗಳ ಎಣಿಕೆ ಪ್ರಕಾರ, ಅಧ್ಯಕ್ಷೀಯ ಸ್ಥಾನಕ್ಕೆ ಎಡ ಸಂಘಟನೆಗಳ ಒಕ್ಕೂಟದ ಅಭ್ಯರ್ಥಿ ಧನಂಜಯ್‌ 1,361 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಎಬಿವಿಪಿಯ ಉಮೇಶ್‌ ಸಿ. ಅಜ್ಮೀರಾ ಅವರು 1,162 ಮತಗಳನ್ನು ಪಡೆದಿದ್ದು, ತೀವ್ರ ಸ್ಪರ್ಧೆ ನೀಡಿದ್ದಾರೆ.

                ಉಪಾಧ್ಯಕ್ಷ ಸ್ಥಾನಕ್ಕೆ ಎಡ ಸಂಘಟನೆಯ ಅವಿಜಿತ್‌ ಘೋಷ್‌ ಅವರು 1,214 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದರೆ, ಅವರ ಎದುರಾಳಿ ಎಬಿವಿಪಿಯ ದೀಪಿಕಾ ಶರ್ಮಾ ಅವರು 984 ಮತಗಳನ್ನು ಪಡೆದು ಪೈಪೋಟಿ ಒಡ್ಡಿದ್ದಾರೆ.

                  ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಡ ಸಂಘಟನೆಗಳ ಬೆಂಬಲಿತ, ಬಿಎಪಿಎಸ್‌ಎ ಅಭ್ಯರ್ಥಿ ಪ್ರಿಯಾಂಶಿ ಆರ್ಯ ಅವರು 1,478 ಮತಗಳನ್ನು ಗಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಅರ್ಜುನ್‌ ಆನಂದ್‌ ಅವರು 1,309 ಮತಗಳನ್ನು ಪಡೆದಿದ್ದಾರೆ. ಎಡ ಸಂಘಟನೆಗಳ ಅಭ್ಯರ್ಥಿಯಾಗಿದ್ದ ಸ್ವಾತಿ ಸಿಂಗ್‌ ಅವರ ಅಭ್ಯರ್ಥಿತನವನ್ನು ಎಬಿವಿಪಿ ಪ್ರಶ್ನಿಸಿದ ಬಳಿಕ, ಚುನಾವಣಾ ಸಮಿತಿಯ ಸಿಂಗ್‌ ಅವರ ನಾಮನಿರ್ದೇಶನವನ್ನು ರದ್ದುಗೊಳಿಸಿತ್ತು. ಆ ಬಳಿಕ ಎಡ ಸಂಘಟನೆಗಳು ತನ್ನ ಬೆಂಬಲವನ್ನು ಪ್ರಿಯಾಂಶಿ ಆರ್ಯಗೆ ವ್ಯಕ್ತಪಡಿಸಿದ್ದವು.

               ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿಯಲ್ಲಿ ಎಬಿವಿಪಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಎಬಿವಿಪಿ ಅಭ್ಯರ್ಥಿಯು 1391 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿಯಾಗಿರುವ ಎಡ ಸಂಘಟನೆಗಳ ಅಭ್ಯರ್ಥಿ ಎಂ.ಡಿ. ಸಾಜಿದ್‌ 1,321 ಮತಗಳನ್ನು ಪಡೆದಿದ್ದಾರೆ. ಇನ್ನೂ ಹಲವು ವಿಭಾಗಗಳ ಮತಗಳ ಎಣಿಕೆ ಕಾರ್ಯ ಬಾಕಿ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries