ನವದೆಹಲಿ: ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿ ಹೊರಹೊಮ್ಮಿದ್ದರೆ, ದೆಹಲಿಯು ವಾಯು ಗುಣಮಟ್ಟದಲ್ಲಿ ಕಳಪೆ ಹೊಂದಿರುವ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಸ್ವಿಸ್ ಸಂಸ್ಥೆ IQAir ನಿಂದ ನೀಡಿದ ವಿಶ್ವ ವಾಯು ಗುಣಮಟ್ಟ ವರದಿ 2023 ಪ್ರಕಾರ, ಬಾಂಗ್ಲಾದೇಶ (ಪ್ರತಿ ಘನ ಮೀಟರ್‌ಗೆ 79.9 ಮೈಕ್ರೋಗ್ರಾಂ) ಮತ್ತು ಪಾಕಿಸ್ತಾನ ( ಪ್ರತಿ ಘನ ಮೀಟರ್ ಗೆ 73.7 ಮೈಕ್ರೋಗ್ರಾಂ) ನಂತರ ಪ್ರತಿ ಘನ ಮೀಟರ್‌ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು ವಾರ್ಷಿಕ PM2.5 ಸಾಂದ್ರತೆಯೊಂದಿಗೆ ಭಾರತವು 2023 ರಲ್ಲಿ 134 ದೇಶಗಳಲ್ಲಿ ಕೆಟ್ಟದಾಗಿದೆ. ಈ ಮೂರು ರಾಷ್ಟ್ರಗಳು ಕೆಟ್ಟ ಗುಣಮಟ್ಟದ ಗಾಳಿ ಹೊಂದಿರುವ ದೇಶವಾಗಿವೆ.
2022 ರಲ್ಲಿ ಭಾರತವು ಎಂಟನೇ ಅತ್ಯಂತ ಮಾಲಿನ್ಯಯುತ ರಾಷ್ಟ್ರವಾಗಿತ್ತು. ಬೇಗುಸರಾಯ್ ಪ್ರತಿ ಘನ ಮೀಟರ್‌ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು PM2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. 2022ರ ಸೂಚ್ಯಂಕದಲ್ಲಿ ಈ ನಗರ ಪಟ್ಟಿಯಲ್ಲಿ ಇರಲಿಲ್ಲ. 2022 ರಲ್ಲಿ ಘನ ಮೀಟರ್‌ಗೆ 89.1 ಮೈಕ್ರೋಗ್ರಾಂನಷ್ಟಿದ್ದ ದೆಹಲಿಯ ವಾಯು ಗುಣಮುಟ್ಟ 2023 ರಲ್ಲಿ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಷ್ಟು ಹದಗೆಟ್ಟಿದೆ.
2018 ರಿಂದ ಸತತ ನಾಲ್ಕು ಬಾರಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿ ಗಳಿಸುತ್ತಿದೆ ಎಂಬುವುದು ಉಲ್ಲೇಖನೀಯ.
ಭಾರತದಲ್ಲಿ 1.36 ಶತಕೋಟಿ ಜನರು PM2.5 ಸಾಂದ್ರತೆಯನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಲಾಗಿದೆ, ಇದು WHO ಹೊರಡಿಸಿದ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು ವಾರ್ಷಿಕ ಮಾರ್ಗದರ್ಶಿ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ. ಅಲ್ಲದೆ, 1.33 ಶತಕೋಟಿ ಜನರು, ಅಥವಾ ಭಾರತೀಯ ಜನಸಂಖ್ಯೆಯ 96 ಪ್ರತಿಶತ ಜನರು, WHO ನ ವಾರ್ಷಿಕ PM2.5 ಮಾರ್ಗಸೂಚಿಗಿಂತ ಏಳು ಪಟ್ಟು ಹೆಚ್ಚಿನ PM2.5 ಮಟ್ಟವನ್ನು ಅನುಭವಿಸುತ್ತಾರೆ. ಈ ಪ್ರವೃತ್ತಿಯು ನಗರ ಮಟ್ಟದ ಡೇಟಾದಲ್ಲಿ ಪ್ರತಿಫಲಿಸುತ್ತದೆ. ಭಾರತದ ಶೇಕಡಾ 66 ಕ್ಕಿಂತ ಹೆಚ್ಚು ನಗರಗಳು ಪ್ರತಿ ಘನ ಮೀಟರ್‌ಗೆ ವಾರ್ಷಿಕ ಸರಾಸರಿ 35 ಮೈಕ್ರೋಗ್ರಾಂಗಳಿಗಿಂತ ಹೆಚ್ಚು.