ಮಂಜೇಶ್ವರ: ಮೀಯಪದವು ಸಮೀಪದ ಕುದ್ದುಪದವು ಶ್ರೀ ಕೊರತಿ ಗುಳಿಗ ದೈವ ಕ್ಷೇತ್ರದಲ್ಲಿ ಎರಡು ವರ್ಷಗಳಿಗೊಮ್ಮೆ ಜರಗುವ ಕೋಲೋತ್ಸವವು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಭಕ್ತಿ ಸಡಗರದಿಂದ ಜರಗಿತು. ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆದ ಕೋಲದ ಸಲುವಾಗಿ ಜರಗಿದ ಭಜನಾ ಸಂಕೀರ್ತನೆಯನ್ನು ಹಿರಿಯ ಸಂಕೀರ್ತನಕಾರ ರವೀಂದ್ರ ಶೆಟ್ಟಿ ಮಡಂದೂರು ದೀಪಪ್ರಜ್ವಲನೆಗೊಳಿಸಿ ಚಾಲನೆ ನೀಡಿದರು. ಹಿರಿಯ ಸಂಕೀರ್ತನಾಕಾರ ವಸಂತ ಭಟ್ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ಬಳಿಕ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ಜರಗಿತು.
ರಾತ್ರಿ ನಡೆದ ಸಬಾ ಕಾರ್ಯಕ್ರಮದಲ್ಲಿ ಹಿರಿಯ ಪ್ರಗತಿಪರ ಕೃಷಿಕÀ ಡಿ. ತ್ಯಾಂಪಣ್ಣ ಶೆಟ್ಟಿ ದೇರಂಬಳ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವಿಶ್ವಹಿಂದೂ ಪರಿಷತ್ ಕಣ್ಣೂರು ವಿಭಾಗದ ಮಾತೃಶಕ್ತಿ ಪ್ರಮುಖ್ ಮೀರಾ ಆಳ್ವ ಉಪಸ್ಥಿತರಿದ್ದು ಮಾತನಾಡಿ, ನಮ್ಮ ಸಂಸ್ಕೃತಿ ಧರ್ಮ ಉಳಿಸಿಬೆಳೆಸುವಲ್ಲಿ ಮಾತೆಯರ ಪಾತ್ರ ಹಿರಿದು. ಮಕ್ಕಳನ್ನು ಸಂಸ್ಕಾರವಂತ ಪ್ರಜೆಗಳಾಗಿ ಸಮಾಜಕ್ಕೆ ನೀಡುವ ಕಾರ್ಯ ಮಾತೆಯರಿಂದಲೇ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಧಾರ್ಮಿಕ ಭಾಷಣ ಗೈದು ಮಾತನಾಡಿ, ಧಾರ್ಮಿಕ ಕೇಂದ್ರಗಳು ಧಾರ್ಮಿಕದೊಂದಿಗೆ ಸಾಂಸ್ಕøತಿಕ, ಸೇವಾ ಕೇಂದ್ರಗಳಾಗಿ ಕಾರ್ಯನಿರ್ಹಿಸಬೇಕಿದೆ. ಪೂಜೆ, ಧ್ಯಾನ, ಭಜನೆಯೊಂದಿಗೆ ಅಶಕ್ತರಿಗೆ ಸಾಂತ್ವನ ನೀಡುವ ಕೆಲಸವನ್ನೂ ಶ್ರದ್ಧಾಕೇಂದ್ರಗಳು ನಡೆಸಬೇಕಿದೆ. ಪ್ರತೀ ಮನೆಗಳಲ್ಲೂ ನಮ್ಮ ಪ್ರಾತಿನಿಧಿಕ ಧರ್ಮ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆ ಗ್ರಂಥಗಳು ಇರಬೇಕು. ಕನಿಷ್ಟ ಗ್ರಂಥಗಳ ಪ್ರಾಥಮಿಕ ಅಧ್ಯಯನವನ್ನಾದರೂ ನಡೆಸಿರಬೇಕು ಎಂದು ಕರೆನೀಡಿದರು.
ಕ್ಷೇತ್ರ ಸೇವಾಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ದೇರಂಬಳ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಉದಯಕುಮಾರ್ ಕೆದುವಾರ್ ಸ್ವಾಗತಿಸಿ, ಕೋಶಾಧಿಕಾರಿ ತುಳಸೀದಾಸ್ ವಂದಿಸಿದರು. ದುರ್ಗಾಪ್ರಸಾದ್ ಬುಡ್ರಿಯ ನಿರೂಪಿಸಿದರು. ರಾತ್ರಿ ಶ್ರೀದೈವಗಳಕೋಲದ ತರುವಾಯ ಬಾಚಕೆರೆ ಮೇಳದವರಿಂದ ನಾಗರಪಂಚಮಿ ಯಕ್ಷಗಾನ ಪ್ರದರ್ಶನ ಜರಗಿತು.