ಕಾಸರಗೋಡು: ರಾಷ್ಟ್ರೀಯ ಆಯುಷ್ ಮಿಷನ್ ವತಿಯಿಂದ ವಿವಿಧ ಹುದ್ದೆಗಳಿಗೆ ಮಾರ್ಚ್ 18 ರಿಂದ ನಡೆಸಲುದ್ದೇಶಿಸಿದ್ದ ಸಂದರ್ಶನ ಮತ್ತು ಲಿಖಿತ ಪರೀಕ್ಷೆಯನ್ನು ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವವರೆಗೆ ಮುಂದೂಡಲಾಗಿದೆ ಎಂದು ರಾಜ್ಯ ಆಯುಷ್ ಮಿಷನ್ ನಿರ್ದೇಶಕ ರಾಜ್ಯ ಆಯುಷ್ ಮಿಷನ್ ಮಾಹಿತಿ ನೀಡಿದ್ದಾರೆ. ಪರಿಷ್ಕøತ ದಿನಾಂಕಗಳನ್ನು ವೆಬ್‍ಸೈಟ್(www.nam.kerala.gov.in)ನಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(0471 2 474 550)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.