ಕುಂಬಳೆ: ಕುಂಬಳೆಯ ವೈದ್ಯ ಮನೆತನವೆಂದೇ ಪ್ರಸಿದ್ದವಾಗಿರುವ ಬೋನಂತಾಯ ಕುಟುಂಬದ ಡಾ.ಮೋಹಿತ್ ಬೋನಂತಾಯ ಅವರು ಅಂತಿಮ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ಡಿ.ವೈ. ಪಾಟೀಲ್ ವಿಶ್ವವಿದ್ಯಾಲಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಪಡೆದಿರುತ್ತಾರೆ. ಓಫಾಲ್ಮೋಲಜಿ ವಿಭಾಗದಲ್ಲಿ ಚಿನ್ನದ ಪದಕವನ್ನೂ ಪಡೆದಿರುವ ಇವರು ದಿ. ಬೋನಂತಾಯ ಮಹಾದೇವ ಭಟ್ಟರ ಮೊಮ್ಮಗ ಹಾಗೂ ಡಾ. ಶ್ಯಾಮಪ್ರಸಾದ ಬೋನಂತಾಯ ಮತ್ತು ಡಾ. ಶ್ಯಾಮಲ ಪ್ರಸಾದ್ ದಂಪತಿಗಳ ಪುತ್ರ.