ಕಾಸರಗೋಡು: ಜಿಲ್ಲೆಯಲ್ಲಿ ಮಳೆಗಾಲಪೂರ್ವ ಸ್ವಚ್ಛತಾ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಿತು.
ಶುಚಿತ್ವ, ತ್ಯಾಜ್ಯ ನಿರ್ವಹಣೆ, ಆರೋಗ್ಯದ ಉಸ್ತುವಾರಿ ನೋಡಲ್ ಅಧಿಕಾರಿಗಳು, ತಹಶೀಲ್ದಾರರು, ವಿಇಒಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಗಾಗಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಆನ್‍ಲೈನ್‍ನಲ್ಲಿ ಮತ್ತು ಏಪ್ರಿಲ್ 10 ರೊಳಗೆ ಪಂಚಾಯತ್ ಮಟ್ಟದ ತರಬೇತಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ವಚ್ಛತಾ ಕಾರ್ಯಗಳನ್ನು 2 ಹಂತಗಳಲ್ಲಿ ಕೈಗೊಳ್ಳಲಾಗುವುದು. ಮೊದಲ ಹಂತದ ಕಾರ್ಯಾಚರಣೆಯನ್ನು ಏಪ್ರಿಲ್ 5 ರಿಂದ 7 ರವರೆಗೆ ನಡೆಸಲಾಗುವುದು. ಏಪ್ರಿಲ್ 7 ರಂದು ಮನೆಗಳಲ್ಲಿ ಡ್ರೈಡೇ ನಡೆಯಲಿದೆ. ಎರಡನೇ ಹಂತ ಮೇ 5 ರಿಂದ 7 ರವರೆಗೆ ನಡೆಯಲಿದೆ. ಮೇ 5 ರಂದು ಮನೆಗಳಲ್ಲಿ ಡ್ರೈಡೇ ನಡೆಯಲಿದೆ. ಮೇ 6 ರಂದು ಸಂಸ್ಥೆಗಳು ಮತ್ತು ಏಪ್ರಿಲ್ 7 ರಂದು ಸಾರ್ವಜನಿಕ ಸ್ಥಳಗಳ ಶುಚೀಕರಣ ನಡೆಯುವುದು.
ಏಪ್ರಿಲ್ 25 ರ ಮೊದಲು ಜಲಮೂಲವನ್ನು ಸ್ವಚ್ಛಗೊಳಿಸಲಾಗುವುದು. ಏಪ್ರಿಲ್ 30ರೊಳಗೆ ವಾರ್ಡ್ ಸ್ವಚ್ಛತೆ ಮತ್ತು ಆರೋಗ್ಯ ಸಮಿತಿ ನೇತೃತ್ವದಲ್ಲಿ ವಾರ್ಡ್ ಮಟ್ಟದ ಅಭಿಯಾನ ನಡೆಸಲಾಗುವುದು. ಮೇ 15ರೊಳಗೆ ವಾರ್ಡ್ ಮಟ್ಟದ ಸ್ವಚ್ಛತಾ ಘೋಷಣೆ ಹಾಗೂ ಮೇ 25ರೊಳಗೆ ಪಂಚಾಯಿತಿ ಮಟ್ಟದ ಸ್ವಚ್ಛತಾ ಘೋಷಣೆ ಮಾಡಲಾಗುವುದು.
ಎಲ್‍ಎಸ್‍ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕಿ ಎ. ಲಕ್ಷ್ಮಿ, ಡಿಎಂಒ ಐಎಸ್‍ಎಂ ಡಾ. ಎ. ಎಲ್ ಶಿಮ್ನಾ, ಡಿಎಂಒ ಹೋಮಿಯೋಪತಿ ಡಾ.ಎ.ಕೆ.ರೇಷ್ಮಾ, ಅನಿಮಲ್‍ಹಸ್‍ಬೆಂಡರಿ ಡಿಡಿ ಬಿ.ಪಿ.ಬಾಲಚಂದ್ರರಾವ್, ಡಿಎಂಒ ಆರೋಗ್ಯ ಪ್ರತಿನಿಧಿ ಎಂ. ವೇಣುಗೋಪಾಲನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್, ಸಹಾಯಕ ಪ್ರಧಾನ ಕೃಷಿ ಅಧಿಕಾರಿ ಟಿ. ವಿನೋದ್ ಕುಮಾರ್, ಪಿಡಬ್ಲ್ಯೂಡಿ ರಸ್ತೆಗಳ ಎಇ ಎಂ.ಎನ್.ಸೌಮ್ಯ ಮತ್ತು ಎಂಜಿಎನ್‍ಆರ್‍ಇಜಿಎಸ್ ಡಿಇ ಜಾಹಿದಾ ಅಬ್ದುರಹಮಾನ್ ಉಪಸ್ಥಿತರಿದ್ದರು.