ಮುಳ್ಳೇರಿಯ: ಅಡೂರಿನ ಮಹಾಲಿಂಗೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದಲ್ಲಿ ಸೋಮವಾರ ರಾತ್ರಿ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಸದಸ್ಯರಿಂದ ಸುಮಾರು 3 ಗಂಟೆಗಳ ಕಾಲ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಗುರುರಾಜ್ ಕಾಸರಗೋಡು, ತನ್ಮಯ್ ಸೋಮಯಾಗಿ ಸುಳ್ಯ, ಉಷಾ ಸುಧಾಕರನ್ (ಗಾಯನ), ಯಕ್ಷಿತ್, ನವಮಿ, ನಯನ್ ಕುಮಾರ್ ಎನ್, ದಿಶಾ ಸಿ ಎನ್, ಪಾವನಿ ಎನ್, ಧನ್ವಿ ಎನ್ (ಸಮೂಹ ನೃತ್ಯ), ಕೃಪೇಶ್ ಎಂ ಆರ್, ಬಾನ್ವಿ ಕುಲಾಲ್, ಕೀರ್ತಿಪ್ರಭಾ, ಪ್ರಥಮ್ಯ ಯು ವೈ ನೆಲ್ಯಾಡಿ, ಶ್ವೇತಾ ಯು ವೈ ನೆಲ್ಯಾಡಿ, ದೀಪ್ತಿ ಅಡ್ಡಂತಡ್ಕ, ರೇಶ್ಮಿಪ್ರಭಾ, ಸನುಷಾ ಸುಧಾಕರನ್, ಡಾ.ವಾಣಿಶ್ರೀ ಕಾಸರಗೋಡು, (ನೃತ್ಯ), ಲಿಖಿತಾ, ರಂಜಿನಿ ಎ, ತೇಜಸ್ವಿನಿ, ಸಮಿತಾ ಭಟ್, ಸನುಷಾ ಸುನಿಲ್ (ಭರತನಾಟ್ಯ), ವರ್ಷಾ ಶೆಟ್ಟಿ ಬಂಬ್ರಾಣ, ಹನ್ವಿತ್ ಆಳ್ವ ಬಾಕ್ರಬೈಲ್ (ಯಕ್ಷ ನೃತ್ಯ) ಮೊದಲಾದವರು ವಿವಿಧ ಕಲಾ ಪ್ರಕಾರವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ಪ್ರಸ್ತುತಿಯನ್ನು ಡಾ.ವಾಣಿಶ್ರೀ ಕಾಸರಗೋಡು ನಿರ್ವಹಿಸಿದರು. ಈ ಸಂದರ್ಭದಲ್ಲಿ ಬಹುಮುಖಿ ಪ್ರತಿಭೆ ವರ್ಷಾ ಶೆಟ್ಟಿ ಬಂಬ್ರಾಣ ಅವರನ್ನು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ವತಿಯಿಂದ ಕಲಾ ಚೈತನ್ಯ -2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಡೂರು ಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಸಮಿತಿ ಮುಖಂಡರಾದ ಅಶೋಕ್ ನಾಯಕ್, ರಾಮ ನಾಯ್ಕ, ವಿದುಷಿ ರೇಖಾ ದಿನೇಶ್ ಮಂಜೇಶ್ವರ, ಪತ್ರಕರ್ತ ವಿರಾಜ್ ಅಡೂರು ಭಾಗವಹಿಸಿದ್ದರು. ಈ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಸ್ಮರಣೆಕೆ ನೀಡಿ ಗೌರವಿಸಲಾಯಿತು.