ಉಪ್ಪಳ: ಬಾಯಾರು ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಶತಚಂಡಿಕಾಯಾಗವು ಏಪ್ರಿಲ್ 26, 27 ಹಾಗೂ 28 ರಂದು ನಡೆಯಲಿದ್ದು ಜಗದ್ಗುರುಗಳಾದ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳು ಚಿತೈಸಲಿದ್ದಾರೆ. ಆ ಪ್ರಯುಕ್ತ ರವೀಶ್ ಆಟಿಕುಕ್ಕೆಯವರ ಮನೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು.
ಹರೀಶ್ ಭಟ್ ಆಟಿಕುಕ್ಕೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರದೀಪ್ ಆಟಿಕುಕ್ಕೆ ದಿಕ್ಸೂಚಿ ಭಾಷಣ ಮಾಡಿ ಕಾರ್ಯಕ್ರಮದ ಯಶಸ್ಸಿಗಾಗಿ ಕರೆನೀಡಿದರು. ವಿಶ್ವೇಶ್ವರ ಕೆದುಕೋಡಿ ಹಾಗೂ ಶ್ರೀಕಾಂತ್ ವಾಟೆತ್ತಿಲ ಅವರ ಉಪಸ್ಥಿತಿಯಲ್ಲಿ ಹಲವು ಸಮಿತಿಗಳನ್ನು ರೂಪೀಕರಿಸಲಾಯಿತು. ಜಯಲಕ್ಷ್ಮಿ ಭಟ್, ಗೀತಾ ಗುಂಪೆ, ಶಂಕರ ಭಟ್ ಉಳುವಾನ, ಎಸ್.ವಿ.ಭಟ್ ವಾಟೆತ್ತಿಲ, ಕೃಷ್ಣ ಭಟ್ ಸಜಂಕಿಲ, ಲಕ್ಷ್ಮೀ ನಾರಾಯಣ ಭಟ್ ಆವಳಮಠ ಉಪಸ್ಥಿತರಿದ್ದರು. ಅಂಕಿತಾ ಆಟಿಕುಕ್ಕೆ ಪ್ರಾರ್ಥನೆ ಹಾಡಿದರು. ರಾಧಾಮಾಧವ ಆಟಿಕುಕ್ಕೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವೇಶ್ವರ ಕೆದುಕೋಡಿ ವಂದಿಸಿದರು.