ಉಪ್ಪಳ: ದೇಶದ ಸಂಸ್ಕøತಿ ಇಂದು ಜೀವಂತವಾಗಿದ್ದರೆ ಅದರ ರಕ್ಷಕರಾಗಿ, ಸಂಸ್ಕøತಿಯ ರಾಯಭಾರಿಗಳಗಿರುವುದರ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೊಡುಗೆ ಅಪಾರವಾದದ್ದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮುದಾಯ ಪ್ರಮುಖರ ಸಭೆ ಉದ್ಘಾಟಿಸಿ ಅವರು ಉಪ್ಪಳ ಭಗವತಿಯಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಾತನಾಡಿದರು.
ಧಾರ್ಮಿಕ ಮುಂದಾಳು ಸದಾನಂದ ಕಡoಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಎಸ್.ಎಸ್.ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್, ಮುಖಂಡರಾದ ಸುಧಾಮ ಗೊಸಾಡ, ಆದರ್ಶ ಬಿ ಎಂ, ಸುನಿಲ್ ಅನಂತಪುರ, ವಸಂತ ಮಯ್ಯ, ಸಮುದಾಯ ಪ್ರಮುಖರು ಉಪಸ್ಥಿತರಿದ್ದರು. ರಮೇಶ್ ಅಟ್ಟೆಗೋಳಿ ಸ್ವಾಗತಿಸಿ, ಪುರುಷೋತ್ತಮ ದೇರಡ್ಕ ವಂದಿಸಿದರು.