ಪೆರ್ಲ: ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಮಾತೃಪೂಜನ ಕಾರ್ಯಕ್ರಮ ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ಇತ್ತೀಚೆಗೆ ಜರುಗಿತು.
ಬೆಳಿಗ್ಗೆ ಯಿಂದ ಮಕ್ಕಳಿಂದ ಭಜನೆ, ಪ್ರಾರ್ಥನೆ ಬಳಿಕ ಅವರಿಗೆ ತಿಲಕ ಇಟ್ಟು ಆರತಿ ಬೆಳಗಿ ಸಿಹಿ ನೀಡಿ ಮಾತಾಜಿಯವರು ಆಶೀರ್ವದಿಸಿದರು. ಮಕ್ಕಳು ಮಾತೆಯರ ಪಾದ ತೊಳೆದು ಅರಸಿನ ಕುಂಕುಮ ಇಟ್ಟು ಹೂಗಳನ್ನು ಸಮರ್ಪಿಸಿ ಪೂಜಿಸಿದರು. ಶಿಶುಮಂದಿರದ ಮಾತಾಜಿಯರಾದ ರೇಖಾ ಮಾತಾಜಿ ಹಾಗೂ ಹೇಮಾ ಮಾತಾಜಿ ಕಾರ್ಯಕ್ರಮ ಆಯೋಜಿಸಿದರು. ಶಿಶು ಮಂದಿರ ಸಮಿತಿ ಪದಾಧಿಕಾರಿಗಳಾದ ನಳಿನಿ ಸೈಪಂಗಲ್ಲು, ಜಯಶ್ರೀ ಪೆರ್ಲ, ಶ್ರೀ ಹರಿ ಆರ್ ಭರಣೀಕರ್ ಸಹಕರಿಸಿದರು. ಬಳಿಕ ಮಾತೃ ಮಂಡಳಿ ವತಿಯಿಂದ ಭಜನೆ ನಡೆಯಿತು.ಮಕ್ಕಳೂ ಪಾಲಕರೂ ಸೇರಿ ಭೋಜನದ ಏರ್ಪಾಡು ಮಾಡಿಸಿದ್ದರು.