ತಿರುವನಂತಪುರ: ಕೇರಳ ಪೋಲೀಸರು ಎಲ್ಲಾ ಸಾಕ್ಷ್ಯಗಳನ್ನು ನಾಶಪಡಿಸಿದ ಬಳಿಕ ಸಿದ್ಧಾರ್ಥ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಚೆರಿಯನ್ ಫಿಲಿಪ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯನ್ನು ಅವಲೋಕಿಸಿದಾಗ ಹಲವು ಆರೋಪಿಗಳಿರುವುದು ಬೆಳಕಿಗೆ ಬಂದಿದೆ. ಅನೇಕ ಆರೋಪಿಗಳಿಗಾಗಿ ಪೋಲೀಸರು ಹುಡುಕಾಟದಲ್ಲಿದ್ದರು ಆದರೆ ಎರಡು ವಾರಗಳಲ್ಲಿ ಸಿಕ್ಕಿಬೀಳಲಿಲ್ಲ. ಕೆಲವು ಬಂಧನಗಳು ಹಾಸ್ಯಾಸ್ಪದವಾಗಿದ್ದವು. ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸಲಾಗಿಲ್ಲ. ಸಾಕ್ಷಿ ಹೇಳದಂತೆ ಹಲವರಿಗೆ ಎಸ್‍ಎಫ್‍ಐ ಮತ್ತು ಪಕ್ಷದ ಸದಸ್ಯರು ಬೆದರಿಕೆ ಹಾಕಿದ್ದರು. ಸಿಬಿಐ ಎಲ್ಲೆಲ್ಲಿ ಬಲೆ ಬೀಸಿದರೂ ನೇಣು ಹಗ್ಗವೇ ಸಾಕ್ಷಿಯಾಗಿ ಸಿಗುತ್ತದೆ.
ಚುನಾವಣೆಗೂ ಮುನ್ನ ಜನರ ಕಣ್ಣಿಗೆ ಮಣ್ಣೆರಚಲು ಸಿಬಿಐ ತನಿಖೆಯನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿಯಾಗಲಿ, ಸಿಪಿಎಂ ಮುಖಂಡರಾಗಲಿ ಸಿದ್ಧಾರ್ಥ್ ಮನೆಗೆ ಬಂದು ಪೋಷÀಕರನ್ನು ಭೇಟಿ ಮಾಡದಿರುವುದು ಅಮಾನವೀಯ’ ಎಂದು ಚೆರಿಯನ್ ಫಿಲಿಪ್ ಹೇಳಿದ್ದಾರೆ.