ಅಗರ್ತಲಾ: ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟಿಪ್ರಾ ಮೋಥಾ ಪಕ್ಷವು ಸೇರಿದ್ದು, ಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ, ಶಾಸಕ ಬ್ರಿಶಕೇತು ದೆಬ್ಬರ್ಮಾ ಗುರುವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಅಗರ್ತಲಾ: ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟಿಪ್ರಾ ಮೋಥಾ ಪಕ್ಷವು ಸೇರಿದ್ದು, ಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ, ಶಾಸಕ ಬ್ರಿಶಕೇತು ದೆಬ್ಬರ್ಮಾ ಗುರುವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಇದೇ ವೇಳೆ ತ್ರಿಪುರಾ ಬುಡಕಟ್ಟು ವಲಯದ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ) ವ್ಯಾಪ್ತಿಯ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಸ್ಥಾಪಿಸಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಪಕ್ಷ ಸ್ಪಷ್ಟಪಡಿಸಿದೆ.
ಟಿಪ್ರಾ ಮೋಥಾ, ತ್ರಿಪುರಾ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನವದೆಹಲಿಯಲ್ಲಿ ನಡೆದ ತ್ರಿಪಕ್ಷೀಯ ಒಪ್ಪಂದದ ಹಿಂದೆಯೇ ಈ ರಾಜಕೀಯ ಬೆಳವಣಿಗೆ ನಡೆದಿದೆ.
ಮಾರ್ಚ್ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಯಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ತ್ರಿಪುರಾದ ಬುಡಕಟ್ಟು ಜನರ ಇತಿಹಾಸ, ಭೂಮಿ, ರಾಜಕೀಯ ಹಕ್ಕುಗಳು, ಆರ್ಥಿಕ ಪ್ರಗತಿ, ಭಾಷೆ ರಕ್ಷಣೆ ಕುರಿತ ಬೇಡಿಕೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಇದರ ಉದ್ದೇಶವಾಗಿತ್ತು.
ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಮಾತನಾಡಿದ ಅನಿಮೇಶ್ ದೆಬ್ಬರ್ಮಾ ಅವರು, ಪಕ್ಷ ತನ್ನ ಗುರಿ ಸಾಧನೆಗೆ ಒತ್ತು ನೀಡಲಿದೆ. ಪ್ರತ್ಯೇಕ ರಾಜ್ಯ ಕುರಿತ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.