ಪೆರ್ಲ: ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ,ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ,ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಪೆರ್ಲದ ಬಜಕೂಡ್ಲಿನಲ್ಲಿರುವ ಮರಾಟಿ ಬೋರ್ಡಿಂಗ್ ಹಾಲ್‍ನಲ್ಲಿ ಜರಗಿತು.
ನಿಡ್ಪಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಗೀತಾ ನಿಡ್ಪಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಶಾರದ ಮರಾಟಿ ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜ ಅಡ್ಯನಡ್ಕ ಸಭೆಯ ಅಧ್ಯಕ್ಷತೆವಹಿಸಿದ್ದರು.ಮಣಿಪಾಲ್ ಮಾಹೆ ಕಂಪ್ಯೂಟರ್ ಡಾಟ ಸಯನ್ಸ್ ಇಲಾಖೆಯ ಸಹಾಯಕ ಪ್ರಾಧ್ಯಾಪಕ ಡಾ.ರಶ್ಮಿ ಎಂ.ಮುಖ್ಯ ಅತಿಥಿಗಳಾಗಿದ್ದರು. ಬದಿಯಡ್ಕ ಗ್ರಾ.ಪಂ.ಮಾಜಿ ಎಸ್.ಟಿ.ಪ್ರಮೋಟರ್ ಶಾರದ, ಶಾರದ ಮರಾಟಿ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಪುμÁ್ಪ ಅಮೆಕ್ಕಳ, ಎಣ್ಮಕಜೆ ಗ್ರಾ.ಪಂ.ಸದಸ್ಯೆ ಉμÁ ಗಣೇಶ್, ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡ್ , ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ್ ಮೊದಲಾದವರು ಸಭೆಯಲ್ಲಿ ಮಾತನಾಡಿದರು..
ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ನಾಟಿವೈದ್ಯೆ ಕಮಲ ಪಾಲೆದಮೂಲೆ ಬಾಯಾರ್ ಹಾಗೂ ಪ್ರಥಮ ಎಸ್.ಟಿ.ಆಟೋ ಚಾಲಕಿ ಗೀತಾ ಆರ್ಲಪದವು ಅವರನ್ನು ಸನ್ಮಾನಿಸಲಾಯಿತು.ಮಹಿಳೆಯರಿಗಾಗಿ ಏರ್ಪಡಿಸಿದ ಆಟೋಟ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ಮಹಿಳಾ ವೇದಿಕೆಯ ಕಾರ್ಯದರ್ಶಿ ರತ್ನಾವತಿ ಸ್ವಾಗತಿಸಿ ಸದಸ್ಯೆ ಗೋಪಿಕೃಷ್ಣ ಬದಿಯಡ್ಕ ವಂದಿಸಿದರು.ಕುಸುಮಾವತಿ ಮತ್ತು ಭವಾನಿ ನಿರೂಪಿಸಿದರು.