ತಿರುವನಂತಪುರಂ: ಪೂಕೋಡ್ ಪಶುವೈದ್ಯಕೀಯ ಕಾಲೇಜು ವಿದ್ಯಾರ್ಥಿ ಸಿದ್ಧಾರ್ಥ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿಗಳೂ ಆಗಿರುವ ರಾಜ್ಯಪಾಲರು ತನಿಖಾ ಆಯೋಗವನ್ನು ನೇಮಿಸಿದ್ದಾರೆ.
ಹೈಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಎ ಹರಿಪ್ರಸಾದ್ ಅವರು ತನಿಖೆಯ ಹೊಣೆ ಹೊತ್ತಿದ್ದಾರೆ.
ವಯನಾಡ್ ನ ಮಾಜಿ ಡಿವೈಎಸ್ಪಿ ವಿಜಿ ಕುಂಞನ್ ಅವರನ್ನು ತನಿಖಾ ಸಹಾಯಕರಾಗಿಯೂ ನೇಮಿಸಲಾಗಿದೆ. ಮೂರು ತಿಂಗಳೊಳಗೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ.
ವಿಸಿ ಮತ್ತು ಡೀನ್ ಅವರ ಲೋಪದೋಷಗಳನ್ನೂ ತನಿಖೆಯ ವ್ಯಾಪ್ತಿಗೆ ಸೇರಿಸಲಾಗುವುದು. ಆಯೋಗದ ನಿರ್ವಹಣಾ ವೆಚ್ಚವನ್ನು ವಿಶ್ವವಿದ್ಯಾಲಯದ ಖಾತೆಯಿಂದ ವಸೂಲಿ ಮಾಡಲಾಗುತ್ತದೆ. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರವೇ ರಾಜ್ಯಪಾಲರು ಮಧ್ಯಪ್ರವೇಶಿಸಿದ್ದಾರೆ.
ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದರೂ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನವೇ ತನಿಖಾ ಆಯೋಗವನ್ನು ನೇಮಿಸಲಾಗಿದೆ.