ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮುಕ್ತ ಮತ್ತು ನಿರ್ಭೀತಿಯಿಂದ ಚುನಾವಣೆ ನಡೆಸಲು ಹಾಗೂ ಅಕ್ರಮ ಹಣ ಸಾಗಣೆ ತಡೆಯಲು ಜಾಗೃತರಾಗುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ವೆಚ್ಚ ಪರಿವೀಕ್ಷಕರಾಗಿ ನೇಮಕಗೊಂಡ ಆನಂದ್ ರಾಜ್ ತಿಳಿಸಿರುವರು.
ಕಾಸರಗೋಡು ಕಲೆಕ್ಟರೇಟ್ ನಲ್ಲಿ ಚುನಾವಣಾ ವೆಚ್ಚ ನಿಗಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಟಾಟಿಕ್ ಸರ್ವೆಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ವೀಡಿಯೋ ವೀಕ್ಷಣಾ ತಂಡ, ಪೋಲೀಸ್, ಅಬಕಾರಿ, ಅರಣ್ಯ ಆದಾಯ ತೆರಿಗೆ ಮತ್ತು ಲೆಕ್ಕಪತ್ರ ಇಲಾಖೆಗಳು ಸಮನ್ವಯದಿಂದ ಚುನಾವಣಾ ಆಯೋಗವು ಪ್ರಚಾರಕ್ಕಾಗಿ ನಿಗದಿಪಡಿಸಿದ 95 ಲಕ್ಷ ರೂ. ಗಡಿಯಲ್ಲಿ ಕಣ್ಗಾವಲು ಬಲಪಡಿಸಬೇಕು. ಅಗತ್ಯ ಬಿದ್ದರೆ ಸ್ಕ್ವಾಡ್‍ಗೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದರು.
ಚುನಾವಣಾ ವೆಚ್ಚ ನಿಗಾ ವಿಭಾಗದ ನೋಡಲ್ ಅಧಿಕಾರಿ ವಿ.ಚಂದ್ರನ್, ಸಹಾಯಕ ವೆಚ್ಚ ವೀಕ್ಷಕರಾದ ಪಿ.ರವಿ, ಪಿ.ಮಹಮ್ಮದ್, ಕೆ.ರಾಜನ್, ಪಿ.ಕೃಷ್ಣಕುಮಾರ್, ಡಾ.ಬೆಂಜಮಿನ್ ಮ್ಯಾಥ್ಯೂ, ಕೆ.ಶಿವಪ್ಪ ನಾಯ್ಕ್, ಟಿ.ಟಿ.ರಮೇಶನ್, ಸಿ.ಚಂದ್ರನ್, ಡಿ.ವೈ.ಎಸ್.ಪಿ. ಶಿಬು ಪಪ್ಪಚ್ಚನ್, ಸಹಾಯಕ ಅಬಕಾರಿ ಆಯುಕ್ತ ಎಚ್.ನೂರುದ್ಧೀನ್, ಆರ್ಎಫ್ಒ ಎ.ಪಿ.ಶ್ರೀಜಿತ್ ಮಾತನಾಡಿದರು. ಮಾತನಾಡಿದರು ಸಭೆಯಲ್ಲಿ ಅಬಕಾರಿ, ಪೆÇಲೀಸ್ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿ ಪ್ರತಿನಿಧಿಗಳು, ವೀಕ್ಷಕ ನೋಡಲ್ ಅಧಿಕಾರಿ ಲಿಜೋ ಜೋಸೆಫ್, ಐಟಿ ಅರ್ಜಿಗಳ ನೋಡಲ್ ಅಧಿಕಾರಿ ಪಿ.ಲೀನಾ, ಮಾಧ್ಯಮ ನೋಡಲ್ ಅಧಿಕಾರಿ ಎಂ.ಮಧುಸೂದನನ್, ಚುನಾವಣಾ ಲೆಕ್ಕಪತ್ರ ಇಲಾಖೆ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.