ಮುಳ್ಳೇರಿಯ: ಕಾಞಂಗಾಡು ಸದ್ಗುರು ತ್ಯಾಗಬ್ರಹ್ಮ ಸಂಗೀತ ಸಭಾದ ನೇತೃತ್ವದಲ್ಲಿ ನಡೆಯುತ್ತಿರುವ ಸಂಗೀತಾರಾಧನೆಯನ್ನು ಪೆರಿಂಜಲ್ಲೂರು ಸಂಗೀತ ಸಭಾ ಸ್ಥಾಪಕ ವಿಜಯ್ ನೀಲಕಂಠನ್ ದೀಪಬೆಳಗಿಸಿ ಉದ್ಘಾಟಿಸಿದರು.
ಸಂಗೀತ ಸಭಾದ ಅರ್ಧಯಕ್ಷ ಬಿ.ಆರ್. ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಡಾ. ಖಾದರ್ ಮಾಂಗಾಡ್, ಪೆರಿಯ ಗೋಕುಲಂ ಗೋಶಾಲೆಯ ಸ್ಥಾಪಕ ವಿಷ್ಣುಪ್ರಸಾದ ಹೆಬ್ಬಾರ್ ಸಂಗೀತ ಸಭೆಯ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಳೆದ 25 ವರ್ಷಗಳಿಂದ ತ್ಯಾಗರಾಜರ ವೇಷವನ್ನು ಧರಿಸಿ ಕಾಣಿಸಿಕೊಳ್ಳುತ್ತಿರುವ ಕೆ.ರವಿ ಅಗ್ಗಿತ್ತಾಯ ಅವರನ್ನು ಟಿ.ಪಿ.ಶ್ರೀನಿವಾಸನ್ ಅವರು ಸನ್ಮಾನಿಸಿದರು. ಸಾಮಾಜಿಕ ಕಾರ್ಯಕರ್ತ ಸುಕುಮಾರನ್ ಪೆರಿಯಚ್ಚೂರು, ಕವಯಿತ್ರಿ ಸಿ.ಪಿ. ಶುಭ, ಕಾಞಂಗಾಡು ಪ್ರೆಸ್ ಫೋರಂ ಅಧ್ಯಕ್ಷ ಟಿ.ಕೆ.ನಾರಾಯಣನ್, ಸಂಗೀತ ಸಭೆಯ ಕಾರ್ಯದರ್ಶಿ ಟಿ.ಪಿ. ಸೋಮಶೇಖರನ್, ಖಜಾಂಜಿ ಪಿ.ಪಿ. ಜಗದೀಶನ್, ಉಷಾ ಈಶ್ವರ ಭಟ್, ಶಿವರಂಜಿನಿ ಭಟ್ ಮಾತನಾಡಿದರು. ನಂತರ ಸಂಗೀತ ಕಛೇರಿ ನಡೆಯಿತು.