ಉಪ್ಪಳ: ಮುಳಿಂಜ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಅಧ್ಯಾಪಕರ ವಿದಾಯಕೂಟ ಸಮಾರಂಭ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣಮೂರ್ತಿ ಎಂ.ಎಸ್‍ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಮೀನ ಟೀಚರ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಾಸರಗೋಡು ಶಿಕ್ಷಣ ಉಪನಿರ್ದೇಶಕÀ ನಂದಿಕೇಶನ್ ಎನ್, ಜಿಲ್ಲಾ ವಿದ್ಯಾಧಿಕಾರಿ ದಿನೇಶನ್ ವಿ ಭಾಗವಹಿಸಿ ಮಾತನಾಡಿದರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಅಗಸ್ಟಿನ್ ಬರ್ನಾಡ್, ಡಾ.ವಿನೋದ್ ಪೆರುಂಬಳ, ಶ್ಯಾಮ್ ಭಟ್, ಜೋಯ್ ಜಿ, ಜಿತೇಂದ್ರ ಎಸ್.ಹೆಚ್, ಚಿತ್ರಾವತಿ ಹಾಗು ವಿವಿಧ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳು ಶುಭಾಶಂಸನೆಗೈದರು. ಮಂಜೇಶ್ವರ ಉಪಜಿಲ್ಲೆಯ ಎಲ್.ಪಿ.ಹಾಗೂ ಯು.ಪಿ ವಿಭಾಗದಲ್ಲಿ ನಿವೃತ್ತರಾಗುತ್ತಿರುವ ಏಳು ಮುಖ್ಯೋಪಾಧ್ಯಾಯರು ಒಂಬತ್ತು ಅಧ್ಯಾಪಕರು ಒಬ್ಬರು ಸಿಬ್ಬಂದಿ ಮತ್ತು ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣಮೂರ್ತಿ ಎಂ.ಎಸ್. ಹಾಗು ನಂದಿಕೇಶನ್ ಎನ್ ರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಂದಲ್ ಶಾಲೆಯ ಮುಖ್ಯೋಪಾಧ್ಯಾಯ ಉಣ್ಣಿಕೃಷ್ಣನ್ ಹಾಗೂ ಕುಡಾಲ್‍ಮೇರ್ಕಳ ಶಾಲೆ ಮುಖ್ಯೋಪಾಧ್ಯಾಯ ಪ್ರಕಾಶನ್ ನಂಬೂದಿರಿಯವರು ಹಾಡನ್ನು ಹಾಡಿದರು. ಎ.ಯು.ಪಿ ಶಾಲೆ ಧರ್ಮತಡ್ಕದ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಭಟ್ ಇವರ ಪ್ರಾರ್ಥಿಸಿದರು. ಸಂಘಟಕ ಸಮಿತಿ ಕಾರ್ಯದರ್ಶಿ ವಿಮಲ್ ಅಡಿಯೋಡಿ ಸ್ವಾಗತಿಸಿ, ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತರ್ ನಿರೂಪಿಸಿ, ವಂದಿಸಿದರು. ವಿವಿಧ ಅಧ್ಯಾಪಕ ಸಂಘಟನಾ ನೇತಾರರು ಸದಸ್ಯರು ಮುಖ್ಯೋಪಾಧ್ಯಾಯರು ಮುಖ್ಯೋಪಾಧ್ಯಾಯಿಯರು ಅಧ್ಯಾಪಕ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.