ಕಾಸರಗೋಡು : ನಗರದ ಅಡ್ಕತ್ತಬೈಲು ಹೊಸಮನೆ ಶ್ರಿಬ್ರಹ್ಮ ಬೈದರ್ಕಳ ಗರಡಿ ಶ್ರೀ ದೂಮಾವತಿ ದೈವಧ ಧರ್ಮ ನೇಮ, ಪುನ:ಪ್ರತಿಷ್ಠಾ ವಾರ್ಷಿಕ ಮಹೋತ್ಸವ, ಬ್ರಹ್ಮ ಬಲಿ ಮತ್ತು ಬೈದರ್ಕಳ ನೇಮೋತ್ಸವದ ಅಂಗವಾಗಿ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪೂಜಾರಿಗಳಾದ ರಮೇಶ, ಪಳ್ಳದಕೊಟ್ಯ ಸಂಜೀವ ಪೂಜಾರಿ, ಕುಟುಂಬ ಸದಸ್ಯರು ಹಾಗೂ ಊರ ಭಕ್ತಾದಿಗಳು ಪಾಲ್ಗೊಂಡಿದ್ದರು. ಗರಡಿ ಮನೆಯಲ್ಲಿ ಮಾ. 22ರಿಂದ 25ರ ವರೆಗೆ ಕಾರ್ಯಕ್ರಮ ಜರುಗಲಿರುವುದು. 22ರಂದು ಬೆಳಗ್ಗೆ ಗಣಪತಿ ಹೋಮ, ಮುಡಿಪು ಶುದ್ಧಿ, ರಾತ್ರಿ 8ಕ್ಕೆ ಭಂಡಾರದ ಆಗಮನ 9ಕ್ಕೆ ಗುಳಿಗ ದೈವದ ಕೋಲ ನಡೆಯುವುದು. 23ರಂದು ಬೆಳಗ್ಗೆ 7ರಿಂದ ಪುನ:ಪ್ರತಿಷ್ಠಾ ವಾರ್ಷಿಕ ದಿನಾಚರಣೆ, ನಾಗತಂಬಿಲ, 9ಕ್ಕೆ ಆರ್ಜಾಲು ಶ್ರೀ ಧೂಮಾವತೀ, 11ಕ್ಕೆ ಹೊಸಮನೆ ಶ್ರೀ ಧೂಮಾವತೀ ದೈವದ ನೇಮ, ಸಂಜೆ 4ಕ್ಕೆ ಕೊರತ್ತಿ ಅಮ್ಮನ ಕೋಲ ನಡೆಯುವುದು.
24ರಂದು ಸಂಜೆ 6ಕ್ಕೆ ಬೈದರ್ಕಳ ಪ್ರದರ್ಶನ, 7ಕ್ಕೆ ಬ್ರಹ್ಮಬಲಿ ಮತ್ತು ಬೈದರ್ಕಳ ಗರಡಿ ಇಳಿಯುವುದು, ರಾತ್ರಿ 12ಕ್ಕೆ ಆಯುಧ ಒಪ್ಪಿಸುವಿಕೆ, ಮರುದಿನ ಬೆಳಗೆಗ 3ಕ್ಕೆ ಮಾಯಾಂದಾಳ್ ದೇವಿ ದರ್ಶನ, 4ಕ್ಕೆ ಪೂಜಾರಿಗಳ ಸೇಟ್, 6ಕ್ಕೆ ಬೈದರ್ಕಳ ಸೇಟ್ ನಡೆಯುವುದು.