ಆಲಪ್ಪುಳ: ಕೇರಳ ಬ್ಯಾಂಕ್‍ನ ವಿವಿಧ ಶಾಖೆಗಳಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ 335 ಗ್ರಾಂ ಚಿನ್ನಾಭರಣ ಕಳವು ಪ್ರಕರಣದಲ್ಲಿ ಕೇರಳ ಬ್ಯಾಂಕ್‍ನ ಮಾಜಿ ಏರಿಯಾ ಮ್ಯಾನೇಜರ್‍ನನ್ನು ಬಂಧಿಸಲಾಗಿದೆ.
ಕೇರಳ ಬ್ಯಾಂಕ್‍ನ ಮಾಜಿ ಏರಿಯಾ ಮ್ಯಾನೇಜರ್, ಚೇರ್ತಲ ಮೂಲದ ಮೀರಾ ಮ್ಯಾಥ್ಯೂ ರನ್ನು ಪೆÇಲೀಸರು ಬಂಧಿಸಿದ್ದಾರೆ.
ಅವರು ಕೆಲವು ದಿನ ಪರಾರಿಯಾಗಿದ್ದರು. ಬ್ಯಾಂಕ್‍ನ ನಾಲ್ಕು ಶಾಖೆಗಳಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನಾಭರಣ ದೋಚಿದ್ದರು. ಪಟ್ಟಣಕ್ಕಾಡ್ ಪೋಲೀಸರು ಇದೀಗ ಬಂಧಿಸಿದ್ದಾರೆ.
ಚೇರ್ತಲದ ಎರಡು ಶಾಖೆಗಳು, ಕೇರಳ ಬ್ಯಾಂಕ್‍ನ ಪಟ್ಟಣಕ್ಕಾಡ್ ಮತ್ತು ಅರ್ಥುಂಕಲ್ ಶಾಖೆಗಳ ನಾಲ್ಕು ಶಾಖೆಗಳಲ್ಲಿ ಗಿರವಿ ಇಟ್ಟಿದ್ದ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿದ್ದವು.
ಚೇರ್ತಲ ನಡಕಾವ್ ಶಾಖೆಯಿಂದ ಅತಿ ಹೆಚ್ಚು ಚಿನ್ನ (171.300 ಗ್ರಾಂ) ನಷ್ಟವಾಗಿದೆ. ಚೇರ್ತಲ ಮುಖ್ಯ ಶಾಖೆಯಲ್ಲಿ 55.480 ಗ್ರಾಂ, ಪಟ್ಟಣಕ್ಕಾಡ್ ಶಾಖೆಯಿಂದ 102.300 ಗ್ರಾಂ, ಅರ್ಥುಂಗಲ್ ನಿಂದ 6 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಬ್ಯಾಂಕ್‍ಗಳ ಶಾಖಾ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಮೀರಾ ಮ್ಯಾಥ್ಯೂ ಅವರನ್ನು ಜೂನ್ 7, 2023 ರಂದು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಶಾಖೆಗಳಿಂದ ಪೋಲೀಸರಿಗೆ ದೂರು ನೀಡಲಾಗಿತ್ತು. ನಿನ್ನೆ ಪೋಲೀಸರು ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡರು.
ಏರಿಯಾ ಮ್ಯಾನೇಜರ್ ಮೀರಾ ಮ್ಯಾಥ್ಯೂ ಅವರು ಬ್ಯಾಂಕ್ ಗಳಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣವನ್ನು ಪರಿಶೀಲಿಸುವ ಅಧಿಕಾರಿಯಾಗಿದ್ದು, ಕೇರಳ ಬ್ಯಾಂಕ್ ನ ನಾಲ್ಕು ಶಾಖೆಗಳಿಂದ 335.08 ಗ್ರಾಂ ಚಿನ್ನಾಭರಣ ಕಳೆದು ಹೋಗಿದೆ ಎಂದು ಪೋಲೀಸ್ ವರದಿ ತಿಳಿಸಿದೆ.