ನವದೆಹಲಿ: ಅಸ್ಸಾಂನ ಲೋಕಸಭೆ ಚುನಾವಣೆಗೆ ಮುನ್ನ ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಲಿಬರಲ್ (UPPL) ಸದಸ್ಯರೊಬ್ಬರು ನೋಟು ಹಿಡಿದು ಮಲಗಿರುವ ಫೋಟೋವನ್ನು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಯುಪಿಪಿಎಲ್‌ನ ವಿಲೇಜ್ ಕೌನ್ಸಿಲ್ ಡೆವಲಪ್‌ಮೆಂಟ್ ಕಮಿಟಿ (ವಿಸಿಡಿಸಿ) ಸದಸ್ಯ ಎಂದು ಗುರುತಿಸಲ್ಪಟ್ಟಿರುವ ಬೆಂಜಮಿನ್ ಬಾಸುಮತರಿ ಸಾಂಪ್ರದಾಯಿಕ ಟವೆಲ್ ಅನ್ನು ಮಾತ್ರ ಧರಿಸಿ, 500 ರೂ ನೋಟುಗಳ ಹಾಸಿಗೆಯ ಮೇಲೆ ಮಲಗಿರುವುದನ್ನು ಚಿತ್ರದಲ್ಲಿ ಕಾಣಬಹುದು.
Fact Check ಪ್ರಕಾರ, ಈ ಫೋಟೋ ಹಳೆಯದ್ದಾಗಿದ್ದು ಚುನಾವಣಾ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಹಳೆಯ ಫೋಟೋವನ್ನು ವೈರಲ್ ಮಾಡಲಾಗಿದೆ ಎಂದು ಬಸುಮತರಿಗೆ ಆಪ್ತ ಮೂಲಗಳು ತಿಳಿಸಿವೆ.