ಕುಂಬಳೆ: ಕುಟುಂಬಶ್ರೀಯ ವಿವಿಧ ಯೋಜನೆಗಾಗಿ ಅತ್ಯುತ್ತಮ ರೀತಿಯಲ್ಲಿ ಸಾಲ ನೆರವು ನೀಡಿ, ಮುಂದಿನ ನಿರ್ವಹಣೆಯನ್ನು ನಡೆಸಿದ ಕೆನರಾ ಬ್ಯಾಂಕ್ ಜಿಲ್ಲೆಯ ಅತ್ಯುತ್ತಮ ಬ್ಯಾಂಕ್ ಆಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಆಯ್ಕೆ ಮಾಡಿದೆ.
ಕುಟುಂಬಶ್ರೀ ಎಕ್ಸಿಕ್ಯೂಟೀವ್ ಡೈರೆಕ್ಟರ್ ಜಾಫರ್ ಮಾಲಿಕ್‍ನಿಂದ ಕೆನರಾ ಬ್ಯಾಂಕ್ ಡೆಪ್ಯೂಟಿ ಜನರಲ್ ಮೆನೇಜರ್ ಕೆ.ಎಸ್.ಪ್ರದೀಪ್, ರೀಜಿಯನಲ್ ಮೆನೇಜರ್ ತಿಮ್ಮ ನಾಯಕ್, ಲೀಡ್ ಬ್ಯಾಂಕ್ ಮೆನೇಜರ್ ಎನ್.ವಿ.ಬಿಮಲ್ ಪುರಸ್ಕಾರವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಕೋ-ಆರ್ಡಿನೇಟರ್ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಎಡಿಎಂ ಇಕ್ಬಾಲ್ ಸಿ.ಎಚ್. ಯೋಜನೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಂ.ಲಕ್ಷ್ಮಿ ಡಿ.ಹರಿದಾಸ್, ಶಿಬ ಎಂ, ಉಷಾ ರಾಜ್ ಮಾತನಾಡಿದರು.