ತಿರುವನಂತಪುರಂ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಕೇರಳ ಪೋಲೀಸರು ಸಾಮಾಜಿಕ ಮಾಧ್ಯಮ ನಿಗಾ ತಂಡಗಳನ್ನು ರಚಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಮತ್ತು ವಿವಿಧ ವ್ಯಾಪ್ತಿ ಮತ್ತು ಜಿಲ್ಲೆಗಳಲ್ಲಿ ಕಣ್ಗಾವಲು ಬಲಪಡಿಸಲಾಗಿದೆ ಎಂದು ರಾಜ್ಯ ಪೋಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ಅಧಿಕೃತವಾಗಿ ಮಾಹಿತಿ ನೀಡಿರುವÀರು.
ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ಸಾಮಾಜಿಕ ಮಾಧ್ಯಮ ಸಂವಹನಗಳ ಮಾಹಿತಿಯನ್ನು ವಾಟ್ಸಾಪ್ ಮೂಲಕ ವರದಿ ಮಾಡಬಹುದು. ಕೇರಳ ಪೋಲೀಸರು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿರುವ ಪೋಸ್ಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಸೈಬರ್ ಪೆÇಲೀಸ್ ಪ್ರಧಾನ ಕಛೇರಿ, ವ್ಯಾಪ್ತಿಯ ಕಚೇರಿಗಳು ಮತ್ತು ಜಿಲ್ಲೆಗಳಲ್ಲಿ ಸಾಮಾಜಿಕ ಮಾಧ್ಯಮ ನಿಗಾ ತಂಡಗಳ ವಾಟ್ಸಾಪ್ ಸಂಖ್ಯೆಗಳನ್ನು ಸಹ ಒದಗಿಸಲಾಗಿದೆ.
ಕೇರಳ ಪೋಲೀಸರ ಫೇಸ್ ಬುಕ್ ಪೋಸ್ಟ್:
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಪೋಲೀಸ್ ವರಿಷ್ಠ ಡಾ. ಶೇಖ್ ದರ್ವೇಶ್ ಸಾಹಿಬ್ ರವರು ನೀಡಿರುವ ಸೂಚನೆ:
ವಾಟ್ಸಾಪ್ ಮೂಲಕ ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ಸಾಮಾಜಿಕ ಮಾಧ್ಯಮ ಸಂವಹನಗಳ ಕುರಿತು ಪೋಲೀಸ್ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ತಂಡಗಳಿಗೆ ಮಾಹಿತಿ ನೀಡಬಹುದು.
ಇದರೊಂದಿಗೆ, ಸೈಬರ್ ಪೋಲೀಸ್ ಪ್ರಧಾನ ಕಚೇರಿ, ರೇಂಜ್ ಆಫೀಸ್‍ಗಳು ಮತ್ತು ವಿವಿಧ ಜಿಲ್ಲೆಗಳಲ್ಲಿನ ಸಾಮಾಜಿಕ ಮಾಧ್ಯಮ ನಿಗಾ ತಂಡಗಳ ವಾಟ್ಸಾಪ್ ಸಂಖ್ಯೆಗಳು ನಿಗಾದಲ್ಲಿರಲಿದೆ.