ಕಾಸರಗೋಡು: 2022 ಡಿಸಂಬರ್ 31ರ ಗೆಜೆಟ್ ಅಧಿಸೂಚನೆಯಂತೆ ಕಾಸರಗೋಡು ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ (ಕನ್ನಡ ಮಾಧ್ಯಮ) (ಪ್ರವರ್ಗ ಸಂ. 707/2022) ಹುದ್ದೆಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಸಂದರ್ಶನ ಕಾಸರಗೋಡು ಲೋಕಸೇವಾ ಆಯೋಗದ ಜಿಲ್ಲಾ ಕಛೇರಿಯಲ್ಲಿ ಏಪ್ರಿಲ್ 3, 4, 17, 18 ಮತ್ತು 19 ರಂದು ನಡೆಯಲಿದೆ. ಸಂದರ್ಶನದ ಮೆಮೊ ಈಗಾಗಲೇ ಅಭ್ಯರ್ಥಿಯ ಪೆÇ್ರಫೈಲ್‍ನಲ್ಲಿ ಲಭ್ಯವಿದ್ದು, ಡೌನ್‍ಲೋಡ್ ಮಾಡಿದ ಸಂದರ್ಶನದ ಮೆಮೊ, ಮೂಲ ಪ್ರಮಾಣಪತ್ರ ಮತ್ತು ಒಂದು ಬಾರಿ ಪರಿಶೀಲನೆ ಮಾಡಿದ ಪ್ರಮಾಣಪತ್ರಗಳೊಂದಿಗೆ ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕು ಎಂದು ಕೆಪಿಎಸ್‍ಸಿ ಜಿಲ್ಲಾ ಅಧಿಕಾರಿ ಪ್ರಕಟಣೆ ತಿಳಿಸಿದೆ.