ಕಾಸರಗೋಡು: ಹೊಸದುರ್ಗ ಕಾರಾಗೃಹದಲ್ಲಿರುವ ಕೈದಿಗಳು ಬಾಯಾರಿದ ಪಕ್ಷಿಗಳಿಗೆ ಹಾಗೂ ಇತರ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ಪಾರಾಗಲು ನೀರು ಒದಗಿಸುವ ಮೂಲಕ ತಮ್ಮ ಪ್ರಾಣಿ ಸ್ನೇಹ ತೋರ್ಪಡಿಸಿದ್ದಾರೆ. ಜೈಲಿನ ಕೈದಿಗಳು ಕಾರಾಗೃಹ ಶಿಕ್ಷೆಗೆ ಸಂಬಂಧಿಸಿದ ಕೆಲಸದ ಭಾಗವಾಗಿ ತಯಾರಿಸಿದ 10ಕ್ಕೂ ಹೆಚ್ಚು ಕಂಟೈನರ್‍ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಹೊಸದುರ್ಗ ಕಾರಾಗೃಹ ಬೇಸಿಗೆಯ ಬೇಗೆಯಲ್ಲಿ ನೀರಿಗಾಗಿ ಹಾತೊರೆಯುವ ಪಕ್ಷಿಗಳು, ಗುಬ್ಬಚ್ಚಿಗಳು ಮತ್ತು ಅಳಿಲುಗಳಿಗೆ ಕುಡಿಯುವ ನೀರನ್ನು ಒದಗಿಸುವ ಆಶ್ರಯ ತಾಣವಾಗಿ ಬದಲಾಗಿದೆ.
ಜಿಲ್ಲಾ ಕಾರಾಗೃಹದ ಕೈದಿಗಳು ತಯಾರಿಸಿದ ಪಕ್ಷಿ, ಪ್ರಾಣಿಗಳಿಗೆ ನೀರುಣಿಸುವ ನೀರಿನ ಕಿರು ಟ್ಯಾಂಕ್‍ಗಳ ಉದ್ಘಾಟನೆಯನ್ನು ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂಧನ್ ನೆರವೇರಿಸಿದರು. ಕಾರಾಗೃಹ ಅಧೀಕ್ಷಕ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರಾಗೃಹ ಅಧಿಕಾರಿ ಯು.ಜಯಾನಂದನ್ ಸ್ವಾಗತಿಸಿದರು. ಮಹಿಳಾ ಸಹಾಯಕ ಅಧೀಕ್ಷಕಿ ಗ್ರೇಡ್-2 ಟಿ.ವಿ.ಸುಮಾ, ಉಪ ಕಾರಾಗೃಹ ಅಧಿಕಾರಿ ಎ.ವಿ.ಪ್ರಮೋದ್, ಎಂ.ವಿ.ಸಂತೋಷ್ ಕಮಾರ್, ಸಹಾಯಕ.ಕಾರಾಗೃಹ ಅಧಿಕಾರಿ ಪಿ.ವಿ.ವಿವೇಕ್, ಟಿ.ಪ್ರತೀಶ್ ಮೋಹನನ್, ಪಿ.ವಿ.ವಿಪಿನ್, ಟಿ.ರಾಜನ್, ವಿನೀತ್ ವಿ. ಪಿಳ್ಳೈ ಕೂಡ ಉಪಸ್ಥಿತರಿದ್ದರು. ಜೈಲಿನಲ್ಲಿ ನಾಲ್ಕು ವರ್ಷಗಳಿಂದ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದರೂ ಇದೇ ಮೊದಲ ಬಾರಿಗೆ ಕೈದಿಗಳೇ ತಯಾರಿಸಿದ ಕಂಟೈನರ್‍ಗಳಲ್ಲಿ ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸಲಾಗುತ್ತಿದೆ. ಬೇಸಿಗೆ ದಾಹ ತೀರಿಸಿಕೊಳಳಲು ಕಾರಾಗೃಹ ಸುತ್ತು ನಾನಾ ತರದ ಪಕ್ಷಿಗಳು, ಅಳಿಲು ಸೇರಿದಂತೆ ವಿವಿಧ ಸಣ್ಣಪುಟ್ಟ ಪ್ರಾಣಿಗಳೂ ನೀರು ಕುಡಿಯಲು ಆಗಮಿಸುತ್ತಿದ್ದು, ಕಾರಾಗೃಹ ವಠಾರ ಪಕ್ಷಿಗಳ ಕಲರವಕ್ಕೆ ಕಾರಣವಾಗುತ್ತಿದೆ.