ಮಂಜೇಶ್ವರ : ತೂಮಿನಾಡು ಅರಬ್ ರೈಡರ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಯೇನೆಪೆÇೀಯ ರಕ್ತನಿಧಿ ದೇರಳಕಟ್ಟೆ ಇವರ ಸಹಕಾರದೊಂದಿಗೆ ಭಾನುವಾರ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಬೆಳಿಗ್ಗೆ ಮೊಹಮ್ಮದ್ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಅಲ್ ಫತಾಃ ಜುಮಾ ಮಸೀದಿ ಖತೀಬ್ ಅಬ್ದುಲ್ ರವೂಫ್ ನಿಝಾಮಿ ಉದ್ಘಾಟಿಸಿದರು. ಅಬ್ದುಲ್ ಖಾದರ್ ಮೊದಲ ರಕ್ತದಾನವನ್ನು ನೀಡಿದರು. ಈ ಸಂದರ್ಭ ತನ್ವೀರ್, ಸಿದ್ದೀಖ್ ತಂಙಳ್,ಹಾಶಿಕ್, ಅನ್ವರ್,ಹನೀಫ್ ನೆಸ್ಟ್ ಗ್ಯಾಲರಿ, ಸಮೀರ್, ಕೆ ಎಂ, ಅಬ್ದುಲ್ ಖಾದರ್ , ಹನೀಫ್, ಬಾಪನ್ ಕುಂಞ, ಹನೀಫ್ ಎಜೆಎಸ್, ಇಲ್ಯಾಸ್ ತೂಮಿನಾಡು, ಇಸ್ಮಾಯಿಲ್, ಪುತ್ತುಭಾವ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡರು. ಸಿದ್ದೀಖ್ ತಂಘಲ್ ಸ್ವಾಗತಿಸಿ, ತನ್ವೀರ್ ವಂದಿಸಿದರು.